ಬೆಂಗಳೂರು:ಮತಾಂತರಕ್ಕೆ ನಾವು ಒತ್ತಾಯ ಮಾಡುವುದಿಲ್ಲ, ಮತಾಂತರ ನಿಷೇಧ ಮಸೂದೆ ತರುವ ಅಗತ್ಯವೂ ಇಲ್ಲ ಎಂದು ಆರ್ಚ್ಬಿಷಪ್ ಡಾ.ಪೀಟರ್ ಮಚಾಡೊ ಹೇಳಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಲವಂತದ ಮತಾಂತರ ವಿಷಯ ಸುಳ್ಳು, ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದಿಲ್ಲ. ಪ್ರತಿಯೊಬ್ಬ ಧರ್ಮಾಧ್ಯಕ್ಷರ ಹೆಸರಲ್ಲಿ ನೂರಾರು ಶಾಲಾ, ಕಾಲೇಜು, ಆಸ್ಪತ್ರೆಗಳಿವೆ. ಒಂದು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಒಬ್ಬರಿಗೂ ಮತಾಂತರ ಮಾಡಲು ನಾವು ಹೇಳಿಲ್ಲ. ಅಪ್ಪಿತಪ್ಪಿ ಸಣ್ಣ ಘಟನೆಯಾಗಿದ್ದು, ದೊಡ್ಡ ವಿಷಯ ಮಾಡೋದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ:ಮತಾಂತರ ಕಡಿವಾಣಕ್ಕೆ ಮಸೂದೆ ತರುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಯಾರೋ ಮಸಿ ಬಳಿಯುವ ಪ್ರಯತ್ನ ಮಾಡ್ತಾ ಇದ್ದಾರೆ. ಸದನದಲ್ಲಿ ಚರ್ಚೆಯಾಗ್ತಿದೆ ಮಾಡಲಿ. ಹೀಗೆ ಮತಾಂತರ ಮಾಡೋದು ಸರಿಯಲ್ಲ ಅಂತಾ ನಾವೇ ಜನರಿಗೆ ಹೇಳಿದ್ದೇವೆ. ಯಾರೋ ಬಂದು ಶಿಲುಬೆ, ಪುಸ್ತಕ ಕೊಟ್ಟು ಮತಾಂತರ ಮಾಡ್ತಾರೆ ಅಂದ್ರೆ ಸರಿಯಲ್ಲ. ನಮಗೂ ನೈತಿಕ ಅಂತರಂಗವಿದೆ. ಜನರಿಗೆ ಫೋರ್ಸ್ ಮಾಡಲ್ಲ. ಮಸೂದೆ ಬಗ್ಗೆ ನನಗೆ ಗೊತ್ತಿಲ್ಲ. ಮಸೂದೆ ಅವಶ್ಯಕತೆ ಇಲ್ಲ ಎಂದರು.