ಬೆಂಗಳೂರು: ರಾಜರಾಜೇಶ್ವರಿ ನಗರ ವ್ಯಾಪ್ತಿಯ ಡಿ. ಗ್ರೂಪ್ ಬಡಾವಣೆ, ಮುದ್ದಿನ ಪಾಳ್ಯದಲ್ಲಿ ಸಾಮಾಜಿಕ ಅಂತರ ಕಾಪಾಡದಿರುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಪಯೋಗಿಸದಿರುವ, ಥರ್ಮಲ್ ಸ್ಕ್ಯಾನಿಂಗ್ ಮಾಡದೇ ಇರುವ ರಿಲಯನ್ಸ್ ಫ್ರೆಶ್ ಮಾರ್ಟ್ ಹಾಗೂ ಉಡುಪಿ ಕೈರುಚಿ ಹೋಟೆಲ್ಅನ್ನು ಆರೋಗ್ಯಾಧಿಕಾರಿ ತಂಡವು ಪರಿಶೀಲನೆ ನಡೆಸಿ ಬೀಗ ಜಡಿದಿದೆ.
ಕೋವಿಡ್ ನಿಯಮ ಪಾಲಿಸದ ರಿಲಯನ್ಸ್ ಫ್ರೆಶ್ ಮಾರ್ಟ್-ಉಡುಪಿ ಕೈರುಚಿ ಹೋಟೆಲ್ಗೆ ಬೀಗ ಜಡಿದ ಬಿಬಿಎಂಪಿ - ನಿಯಮಬಾಹಿರವಾಗಿ ನಡೆದುಕೊಂಡ ಹೋಟೆಲ್ ಹಾಗೂ ಮಳಿಗೆ
ನಗರದಲ್ಲಿ ತೀವ್ರ ಪ್ರಮಾಣದಲ್ಲಿ ಕೋವಿಡ್ ಸಾವು-ನೋವುಗಳಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿ, ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸುತ್ತಿದೆ.
louck hotel
ನಗರದಲ್ಲಿ ತೀವ್ರ ಪ್ರಮಾಣದಲ್ಲಿ ಕೋವಿಡ್ ಸಾವು-ನೋವುಗಳಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿ, ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸುತ್ತಿದೆ. ರಾಜರಾಜೇಶ್ವರಿ ನಗರ ವಲಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ನೇತೃತ್ವದಲ್ಲಿ ಇಂದು ನಿಯಮ ಪಾಲಿಸದ ಹೋಟೆಲ್ ಹಾಗೂ ಮಳಿಗೆಯನ್ನು ಮುಚ್ಚಲಾಯಿತು.
Last Updated : Apr 6, 2021, 8:33 PM IST