ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಹಂಚಿಕೆಯಾಗಿರುವ ಸರ್ಕಾರಿ ನಿವಾಸ ಕಾವೇರಿ ತೆರವಿಗೆ, ಡಿಸೆಂಬರ್ನಲ್ಲಿ ನಡೆಯಲಿರುವ ಉಪ ಚುನಾವಣೆವರೆಗೆ ಕಾಲಾವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮಾಡಿದ್ದ ಮನವಿಯನ್ನು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿರಸ್ಕರಿಸಿದೆ.
ಉಪ ಚುನಾವಣೆವರೆಗೂ ಕಾವೇರಿ ವಾಸ್ತವ್ಯ: ಸಿದ್ದರಾಮಯ್ಯ ಬೇಡಿಕೆ ತಿರಸ್ಕಾರ - ಇತ್ತೀಚಿನ ಬೆಂಗಳೂರು ಸುದ್ದಿ
ಕಾವೇರಿ ನಿವಾಸದಲ್ಲೇ ವಾಸ್ತವ್ಯ ಹೂಡಬೇಕೆನ್ನುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯರ ಯತ್ನ ವಿಫಲವಾದ ಬೆನ್ನಲ್ಲೇ ಉಪ ಚುನಾವಣೆವರೆಗೂ ಕಾಲಾವಕಾಶ ಪಡೆಯುವ ಯತ್ನವೂ ಫಳ ನೀಡಿಲ್ಲ.
ಕಾವೇರಿ ನಿವಾಸದಲ್ಲೇ ವಾಸ್ತವ್ಯ ಹೂಡಬೇಕೆಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಯತ್ನ ವಿಫಲವಾದ ಬೆನ್ನಲ್ಲೇ, ಉಪ ಚುನಾವಣೆವರೆಗೂ ಕಾಲಾವಕಾಶ ಪಡೆಯುವ ಯತ್ನವೂ ಫಲ ನೀಡಿಲ್ಲ. ಹೆಚ್ಚುವರಿ ಸಮಯಾವಕಾಶ ನೀಡಲು ಡಿಪಿಎಆರ್ ನಿರಾಕರಿಸಿದೆ.
15 ಕ್ಷೇತ್ರಗಳ ಉಪ ಚುನಾವಣೆ ಡಿಸೆಂಬರ್ನಲ್ಲಿ ನಡೆಯಲಿದ್ದು, ನವೆಂಬರ್ 11ರಿಂದ ನೀತಿ ಸಂಹಿತೆ ಜಾರಿಯಾಗಲಿದೆ. ಈ ನಡುವೆ ನಿವಾಸ ತೆರವು ಮಾಡಿ ಹೊಸ ನಿವಾಸಕ್ಕೆ ಸ್ಥಳಾಂತರವಾಗುವುದು ಕಷ್ಟವಾಗಿದ್ದು, ಉಪ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾವೇರಿಯಲ್ಲಿ ಇರಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯರ ಈ ಮನವಿಯನ್ನು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿರಸ್ಕರಿಸಿದ್ದು, ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ರೇಸ್ ವ್ಯೂ ಕಾಟೇಜ್-2 ವಾಸ್ತವ್ಯಕ್ಕೆ ಸಿದ್ಧವಿದ್ದು ತಕ್ಷಣದಲ್ಲೇ ಕಾವೇರಿ ನಿವಾಸವನ್ನ ತೆರವು ಮಾಡುವಂತೆ ಸೂಚನೆ ನೀಡಿದೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.