ಕರ್ನಾಟಕ

karnataka

ETV Bharat / state

ಅತ್ತ ಕೋರ್ಟ್​ನಲ್ಲಿ ವಾದ-ಪ್ರತಿವಾದ... ಇತ್ತ ಮುಂಬೈನಲ್ಲಿ ಅತೃಪ್ತ ಶಾಸಕರಲ್ಲಿ ಫುಲ್​​ ಟೆನ್ಷನ್​​​! - ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​ನಲ್ಲಿ ಪರ ವಿರೋಧ ವಾದಗಳು ನಡೆಯುತ್ತಿದ್ದ ಹಿನ್ನೆಲೆ ಅತೃಪ್ತರಲ್ಲಿ ಟೆನ್ಷನ್ ಹೆಚ್ಚಾಗಿತ್ತು. ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತೋ ಎಂಬ ಆತಂಕ ಅತೃಪ್ತರನ್ನು ಕಾಡುತ್ತಿತ್ತು. ವಾದ ಪ್ರತಿವಾದ ಆಲಿಸಿರುವ ಸುಪ್ರೀಂ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟ್​

By

Published : Jul 16, 2019, 4:28 PM IST

ಬೆಂಗಳೂರು/ಮುಂಬೈ: ಅತ್ತ ಸುಪ್ರೀಂ ಕೋರ್ಟ್​ನಲ್ಲಿ ರಾಜೀನಾಮೆ ಸಂಬಂಧ ವಾದ ವಿವಾದ ನಡೆಯುತ್ತಿದ್ದರೆ, ಇತ್ತ ಮುಂಬೈ ಹೊಟೇಲ್‌ನಲ್ಲಿರುವ ಅತೃಪ್ತರ ಕುತೂಹಲ, ಆತಂಕ ಹೆಚ್ಚಾಗಿತ್ತು.

ತಮ್ಮ ಪರ ವಕೀಲರು ಒಳ್ಳೆಯ ರೀತಿಯಲ್ಲಿ ವಾದ ಮಾಡಿದ್ದಾರೆ. ಆದರೆ ಕೋರ್ಟ್ ಏನು ತೀರ್ಪು ನೀಡುತ್ತೋ ಎಂಬ ಕುತೂಹಲದಲ್ಲಿ ಅತೃಪ್ತರು ಇದ್ದರು. ಹೊಟೇಲ್​ನಲ್ಲೇ ಟಿವಿಗಳಲ್ಲಿ ಬರುತ್ತಿರುವ ವಾದ ಪ್ರತಿ ವಾದಗಳನ್ನು ಅತೃಪ್ತ ಶಾಸಕರು ಆತಂಕದಿಂದಲೇ ವೀಕ್ಷಿಸಿದ್ದಾರೆ.

ಇಷ್ಟು ಹೊತ್ತು ಕೋರ್ಟ್​ನ ವಾದ ಪ್ರತಿ ವಾದಗಳನ್ನು ಮಾಧ್ಯಮಗಳ ಮೂಲಕ ಹೋಟೆಲ್​ನಲ್ಲೇ ಕೂತು ಅತೃಪ್ತರು ಗಮನಿಸುರುವುದರ ಜತೆಗೆ ತಮ್ಮ ವಕೀಲರರ ಜೊತೆ ನಿರಂತರ ಸಂಪರ್ಕದಲ್ಲಿದ್ದರು.

ಇದೀಗ ವಾದ ವಿವಾದ ಆಲಿಸಿರುವ ಸುಪ್ರೀಂ, ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಒಟ್ಟಿನಲ್ಲಿ ಕೋರ್ಟ್​ನಲ್ಲಿನ ವಿಚಾರಣೆ ಅತೃಪ್ತರ ಹೃದಯ ಬಡಿತವನ್ನು ಹೆಚ್ಚಾಗಿಸಿದೆ. ಸದ್ಯ ಸ್ಪೀಕರ್​ಗೆ ಕೋರ್ಟ್ ರಾಜೀನಾಮೆ ಸಂಬಂಧ ಶೀಘ್ರ ನಿರ್ಧರಿಸುವಂತೆ ನಿರ್ದೇಶನ ನೀಡಬಹುದು ಎಂಬ ವಿಶ್ವಾಸದಲ್ಲಿದ್ದಾರೆ ಅತೃಪ್ತ ಶಾಸಕರು.

ABOUT THE AUTHOR

...view details