ಬೆಂಗಳೂರು: ಮುಂಬೈನಿಂದ ಆಗಮಿಸಿರುವ ಅತೃಪ್ತ ಶಾಸಕರು ಸ್ಪೀಕರ್ ಭೇಟಿಗೆ ತೆರಳಿದ್ದು, ಈ ವೇಳೆ ಕೆ.ಆರ್ ಪುರ ಶಾಸಕ ಭೈರತಿ ಬಸವರಾಜ್ ರಾಜೀನಾಮೆ ಸಲ್ಲಿಕೆಗೆ ಓಡೋಡಿ ಬಂದಿದ್ದಾರೆ.
ಸ್ಪೀಕರ್ ಕಚೇರಿಗೆ ಓಡೋಡಿ ಬಂದ ಶಾಸಕ ಭೈರತಿ ಬಸವರಾಜ್!
ವಿಧಾನಸೌಧದಲ್ಲಿರುವ ಸ್ಫಿಕರ್ ಕಚೇರಿಗೆ ಅತೃಪ್ತ ಶಾಸಕ ಭೈರತಿ ಬಸವರಾಜ್ ಓಡೋಡಿ ಬಂದಿರುವ ಘಟನೆ ನಡೆದಿದೆ.
ಶಾಸಕ ಭೈರತಿ ಬಸವರಾಜ್
ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಲು ಅತೃಪ್ತ ಶಾಸಕರು ವಿಧಾನಸೌಧಕ್ಕೆ ಆಗಮಿಸಿದ್ದು, ಅವರ ವಿಚಾರಣೆ ನಡೆಸಲಾಗುತ್ತಿದೆ.
ಇದಕ್ಕೂ ಮುನ್ನ ಬೆಂಗಳೂರು ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅತೃಪ್ತ ಶಾಸಕರು ಅಲ್ಲಿಂದ ನೇರವಾಗಿ ಸಿಗ್ನಲ್ ಫ್ರೀ ಸಾರಿಗೆ ವ್ಯವಸ್ಥೆಯಡಿ ವಿಧಾನಸೌಧಕ್ಕೆ ಆಗಮಿಸಿದರು.ಸರಿಯಾಗಿ 6 ಗಂಟೆ 03 ನಿಮಿಷಕ್ಕೆ ಆಗಮಿಸಿದ ಅವರು ಬಸ್‌ನಿಂದ ಇಳಿದು ಓಡೋಡಿ ಸ್ಪೀಕರ್ ಕಚೇರಿ ತಲುಪಿದರು.