ಕರ್ನಾಟಕ

karnataka

ETV Bharat / state

ಕರವೇ ರಾಜ್ಯ ಉಪಾಧ್ಯಕ್ಷನಿಗೆ ಪಿಎಸ್​ಐಯಿಂದ ಕಪಾಳಮೋಕ್ಷ : ರವಿ ಚನ್ನಣ್ಣನವರ್ ಹೇಳಿದ್ದು ಹೀಗೆ

ಕರವೇ ರಾಜ್ಯ ಉಪಾಧ್ಯಕ್ಷನಿಗೆ ಪಿಎಸ್​ಐಯಿಂದ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಚನ್ನಣ್ಣನವರ್ ಪ್ರತಿಕ್ರಿಯಿಸಿದ್ದಾರೆ.

PSI slap to KARAVE state vice president, PSI slap to KARAVE state vice president in Bangalore, Ravi Channannavar reaction about PSI slap, Ravi Channannavar reaction about  PSI slap issue, Ravi Channannavar news, ಕರವೇ ರಾಜ್ಯ ಉಪಾಧ್ಯಕ್ಷನಿಗೆ  ಪಿಎಸ್​ಐಯಿಂದ ಕಪಾಳ ಮೋಕ್ಷ, ಬೆಂಗಳೂರಿನಲ್ಲಿ ಕರವೇ ರಾಜ್ಯ ಉಪಾಧ್ಯಕ್ಷನಿಗೆ  ಪಿಎಸ್​ಐಯಿಂದ ಕಪಾಳ ಮೋಕ್ಷ, ಪಿಎಸ್​ಐ ಕಪಾಳಮೋಕ್ಷದ ಬಗ್ಗೆ ರವಿ ಚನ್ನಣ್ಣನವರ್​ ಪ್ರತಿಕ್ರಿಯೆ, ಪಿಎಸ್​ಐ ಕಪಾಳಮೋಕ್ಷ ವಿವಾದದ ಬಗ್ಗೆ ರವಿ ಚನ್ನಣ್ಣನವರ್​ ಪ್ರತಿಕ್ರಿಯೆ, ರವಿ ಚನ್ನಣ್ಣನವರ್​ ಸುದ್ದಿ,
ರವಿ ಚನ್ನಣ್ಣನವರ್ ಪ್ರತಿಕ್ರಿಯೆ

By

Published : Apr 18, 2021, 2:42 AM IST

ನೆಲಮಂಗಲ :ಪಿಎಸ್​ಐಯೊಬ್ಬರು ಕರವೇ ಉಪಾಧ್ಯಕ್ಷನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಪೊಲೀಸರು ಮತ್ತು ಸಂಘಟನೆಗಳ ಪ್ರತಿಷ್ಠೆಗೆ ಕಾರಣವಾಗಿದೆ. ಸಂಘಟನೆಗಳ ಮುಖಂಡರು ಪಿಎಸ್​ಐ ಅಮಾನತು ಮಾಡುವಂತೆ ಮನವಿ ಮಾಡಿದ್ದಾರೆ. ಸಂಘಟನೆಗಳು ನೊಂದವರ ಪರವಾಗಿರಬೇಕೆಂದು ಎಸ್ಪಿ ರವಿ ಡಿ ಚನ್ನಣ್ಣನವರ್ ಹೇಳಿದರು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸರು ಲೋಕೇಶ್ ಮತ್ತು ರಂಗಸ್ವಾಮಿಯವರನ್ನ ವಶಕ್ಕೆ ಪಡೆದಿದ್ದರು. ಈ ಸಮಯದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಬಂಧಿತರನ್ನ ಮಾತನಾಡಿಸಿದ್ದಾರೆ. ಈ ವಿಚಾರಕ್ಕೆ ಪಿಎಸ್​ಐ ಸುರೇಶ್ ಉಮೇಶ್ ಗೌಡರಿಗೆ ಕಪಾಳ ಮೋಕ್ಷ ಮಾಡಿದ್ದು, ಕನ್ನಡ ಸಂಘಟನೆ ಅಕ್ರೋಶಕ್ಕೆ ಕಾರಣವಾಗಿದೆ. ಪಿಎಸ್ ಐ ಸುರೇಶ್​ರನ್ನು ಅಮಾನತು ಮಾಡುವಂತೆ ಠಾಣೆಗೆ ಬಂದು ಡಿವೈಎಸ್ಪಿ ಮೋಹನ್​ರಿಗೆ ಮನವಿ ಸಲ್ಲಿದರು .

ರವಿ ಚನ್ನಣ್ಣನವರ್ ಪ್ರತಿಕ್ರಿಯೆ

ಕರವೇ ಉಪಾಧ್ಯಕ್ಷನ ಕಪಾಳ ಮೋಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್, ರೈತನ ಜಮೀನಿನ ಫೇಕ್ ಜಿಪಿಎ ಸೃಷ್ಟಿಸಿ ಖಾತೆ ತಿದ್ದುಪಡಿ ಮಾಡಿದ ಹಿನ್ನೆಲೆ ಲೋಕೇಶ್ ಮತ್ತು ರಂಗಸ್ವಾಮಿ ಎಂಬುವರನ್ನ ವಶಕ್ಕೆ ಪಡೆದ ನೆಲಮಂಗಲ ಟೌನ್ ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದರು.

ಈ ಸಮಯದಲ್ಲಿ ಠಾಣೆಯಲ್ಲಿದ್ದವರ ಪರವಾಗಿ ಬಂದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಪಿಎಸ್ಐ ಅನುಮತಿ ಇಲ್ಲದೆ ಮಾತನಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಮೇಶ್ ಗೌಡ ಮತ್ತು ಪಿಎಸ್​ಐ ಸುರೇಶ್ ನಡುವೆ ಮಾತಿನ ಚಕಮಕಿ ನಡೆದು ಪಿಎಸ್​ಐ ಉಮೇಶ್ ಗೌಡರಿಗೆ ಕಪಾಳ ಮೋಕ್ಷ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಪಿಎಸ್​ಐ ಸುರೇಶ್ ಹೆಚ್ಚುವರಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.

ಪೊಲೀಸ್ ಸ್ಟೇಷನ್ ಒಂದು ದೇವಾಲಯ ಇದ್ದಂತೆ. ಸಂಘಟನೆಗಳ ಮುಖಂಡರು ನೊಂದವರ ಪರವಾಗಿ ಠಾಣೆಗೆ ಬರಬೇಕು. ವೈಟ್ ಕಲರ್ ಕ್ರಿಮಿನಲ್​ಗಳ ಪರ ಬರಬಾರದು. ಕಿರಿಯ ಪೊಲೀಸ್ ಅಧಿಕಾರಿಗಳ ಬಗ್ಗೆ ಸಮಸ್ಯೆ ಇದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕೆಂದು ರವಿ ಚನ್ನಣ್ಣನವರ್​ ಹೇಳಿದರು.

For All Latest Updates

ABOUT THE AUTHOR

...view details