ಕರ್ನಾಟಕ

karnataka

ETV Bharat / state

ಅದು ಪ್ರೇಮದ ಕಾಣಿಕೆಯಲ್ಲ,, ಆ 'ವಾಂಛೆ'ಗೆ ಲವ್‌ ಅಂದ್ಕೊಂಡು ಮರುಳಾಗಿ, ಮೈಮರೆತಳು.. - ಚಾಮರಾಜಪೇಟೆ ಪೊಲೀಸ್ ಠಾಣೆ

ಟಿವಿ ನೋಡಲೆಂದು ಸಂಬಂಧಿಕರ‌ ಮನೆಗೆ ಆ ಯುವತಿ ಪದೇಪದೆ ಹೋಗುತ್ತಿದ್ದಳು. ಅದೇನಾಯ್ತೋ ಏನೋ ಪ್ರೀತಿ ಅಂದ್ಕೊಂಡು ಯುವಕನ ಜತೆಗೆ ಮೈಮರೆತಳು. ಇದರಿಂದಾಗಿ ಆಸ್ಪತ್ರೆಗೆ ಹೋದಾಗಲೇ ಆಕೆ ಮದುವೆಗೊ ಮೊದಲೇ ತಾಯಿ ಆಗ್ತಿರೋದು ಗೊತ್ತಾಗಿತ್ತು.

ಅತ್ಯಾಚಾರ

By

Published : Aug 12, 2019, 2:05 PM IST

ಬೆಂಗಳೂರು :ಟಿವಿ ನೋಡಲೆಂದು ಸಂಬಂಧಿಕರ‌ ಮನೆಗೆ ಹೋಗುತ್ತಿದ್ದ ಯುವತಿ ಮೇಲೆ‌ ನಿರಂತರ ಅತ್ಯಾಚಾರ ಮಾಡಿರುವ ಘಟನೆ ಚಾಮರಾಜ ಪೇಟೆ ಬಳಿ‌ ನಡೆದಿದೆ.

ಇತ್ತೀಚೆಗೆ ಮಗಳಿಗೆ ಸುಮಾರು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದೆಯೆಂದು ತಾಯಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆಂದು ಕರೆದೊಯ್ದಾಗಲೇ ಆಕೆ ಮದುವೆಗೂ ಮೊದಲೇ ತಾಯಿ ಆಗಿರೋದು ದೃಢಪಟ್ಟಿತ್ತು. ಇದನ್ನ ಕೇಳಿ ಯುವತಿಯ ತಾಯಿಗೆ ಶಾಕ್ ಆಗಿತ್ತು.

ಯುವತಿಗೆ ತಂದೆ ಇಲ್ಲ. ಆದರೆ, ತಾಯಿ ಅವರಿವರ ಮನೆಯಲ್ಲಿ ಕೆಲಸ‌ ಮಾಡಿ ಮಗಳನ್ನ ಸಾಕುತ್ತಿದ್ದರು. ಬೆಳಗ್ಗೆ ಹೋದರೆ ಸಂಜೆ ಮನೆಗೆ ಬರುತ್ತಿದ್ದರು. ಈ ವೇಳೆ ಟಿವಿ ನೋಡಲೆಂದು ಸಂಬಂಧಿಕರ ಮನೆಗೆ ಯುವತಿ ಪದೇಪದೆ ಹೋಗ್ತಾಯಿದ್ದಳಂತೆ. ಆಗ ಮನೆಯಲ್ಲಿರುತ್ತಿದ್ದ ಲಕ್ಷ್ಮಣ್ ಎಂಬಾತ ದಿನಾಲೂ‌ ಯುವತಿ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದನಂತೆ. ಇದನ್ನೇ ಪ್ರೀತಿ ಎಂದು ತಿಳಿದ ಯುವತಿ ಮೋಸ ಹೋಗಿದ್ದಾಳೆ. ತಾನು ಆತನನ್ನ ಪ್ರೀತಿಸಿದ್ದಾಳೆ. ಆದರೆ, ಈಗ ಒಂದು ವಾರದಿಂದ ದೇಹದಲ್ಲಿ ಏರುಪೇರಾಗಿರೋದನ್ನ ಕಂಡಿದ್ದ ಯುವತಿಯ ತಾಯಿ ಯಾಕೋ ಸಂಶಯ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಗ ಮಗಳು ಮದುವೆ ಆಗದೇ ಮಗು ಆಗ್ತಿರೋದನ್ನ ತಿಳಿದು ಶಾಕ್‌ಗೆ ಒಳಗಾಗಿದ್ದಾಳೆ. ತನ್ನ ಮಗಳ ಮೇಲೆ ಲಕ್ಷ್ಮಣ್ ಎಂಬ ವ್ಯಕ್ತಿ ನಿರಂತರ ಅತ್ಯಾಚಾರ ಮಾಡಿದ್ದಾನೆ ಅಂತಾ ಸದ್ಯ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿಯ ತಾಯಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details