ಕರ್ನಾಟಕ

karnataka

ETV Bharat / state

ಜಾಧವ್​ ಸನ್ಮಾನಿಸಿದ‌ ಕೈ ರೆಬೆಲ್ ಶಾಸಕ: ಜಾರಕಿಹೊಳಿ ಕಮಲ ಮುಡಿಯುವ ಕಾಲ ಸನ್ನಿಹಿತವಾಯ್ತಾ?

ಕಾಂಗ್ರೆಸ್​ನ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗುವುದು ಸನ್ನಿಹಿತವಾಗಿದೆ. ಆಗಾಗ ಕೈ ಮುಖಂಡರ ವಿರುದ್ಧ ಕೆಂಡ ಕಾರುತ್ತಿರುವ ಜಾರಕಿಹೊಳಿ, ಇದೀಗ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಳ್ಳುವ ಮೂಲಕ ಕಾಂಗ್ರೆಸ್​ಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ನೂತನ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಅವರನ್ನು ಸನ್ಮಾನಿಸಿದ ಕೈ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ

By

Published : May 25, 2019, 10:18 AM IST

ಬೆಂಗಳೂರು:ಕಾಂಗ್ರೆಸ್​ನಿಂದ ಒಂದು ಕಾಲು ಹೊರಗಿಟ್ಟಿರುವ ರೆಬಲ್​ ಶಾಸಕ ರಮೇಶ್ ಜಾರಕಿಹೊಳಿ, ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿ ಸೇರ್ಪಡೆ ಸನ್ನಿಹಿತವಾಗಿದೆ ಎನ್ನುವ ಮಾತು ಕೇಳಿಬಂದಿದೆ.

ಹೌದು, ಬಿಜೆಪಿ ನಾಯಕರ ಪಾಳಯದಲ್ಲಿ ಕಾಂಗ್ರೆಸ್​ನ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಗುರುತಿಸಿಕೊಂಡಿದ್ದಾರೆ. ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿ ಸಂಸತ್​​ಗೆ ಪ್ರವೇಶ ಮಾಡುತ್ತಿರುವ ನೂತನ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಅವರನ್ನು ರಮೇಶ್ ಜಾರಕಿಹೊಳಿ ಸನ್ಮಾನಿಸಿದ್ದಾರೆ. ಆ ಮೂಲಕ ಕಾಂಗ್ರೆಸ್​ಗೆ ಗುಡ್ ಬೈ ಹೇಳುವ ಮುನ್ಸೂಚನೆ ನೀಡಿದ್ದಾರಾ ಎನ್ನುವ ಮಾತುಗಳು ಹರಿದಾಡುತ್ತಿವೆ.

ನೂತನ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಅವರನ್ನು ಸನ್ಮಾನಿಸಿದ ಕೈ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ

ತಮ್ಮ ನಿವಾಸದಲ್ಲಿ ಭೇಟಿಯಾದ ಡಾ.ಉಮೇಶ್ ಜಾಧವ್ ಮತ್ತು ಬಿಜೆಪಿ ನಾಯಕರ ಜೊತೆಗೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದರು. ಆಪರೇಷನ್ ಕಮಲ‌, ಮೈತ್ರಿ‌ ಸರ್ಕಾರ ಪತನಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳುವಂತೆ ಮಾಡಿದೆ.

ಮಾತುಕತೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ, ಮೈತ್ರಿ ಸರ್ಕಾರದ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಮಾತುಕತೆ ಬಳಿಕ ಬಿಜೆಪಿ ಸಂಸದ ಜಾಧವ್​ರನ್ನು ರಮೇಶ್ ಜಾರಕಿಹೊಳಿ ಸನ್ಮಾನಿಸಿದರು. ಈ ವೇಳೆ ಮಾಜಿ ಸಚಿವ ಸಿ.ಪಿ .ಯೋಗೇಶ್ವರ್, ಮಾಲಿಕಯ್ಯ ಗುತ್ತೇದಾರ್ ಹಾಜರಿದ್ದರು.

ABOUT THE AUTHOR

...view details