ಬೆಂಗಳೂರು: ಸಿಡಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಿದ್ದು, ಇಂದು ಗೈರಾಗುವ ಸಾಧ್ಯತೆಯಿದೆ.
ಆಡುಗೋಡಿಯ ವಿಚಾರಣೆಗೆ ಇಂದು ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಸಮಯ 12 ಗಂಟೆಯಾಗುತ್ತಿದ್ದರೂ ರಮೇಶ್ ಜಾರಕಿಹೊಳಿ ಬರುವ ಲಕ್ಷಣ ಕಾಣಿಸುತ್ತಿಲ್ಲ.
ನ್ಯಾಯಾಧೀಶರ ಹಾಗೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆ ಸಾರ್ವಜನಿಕವಾಗಿ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿಲ್ಲ. ಬಂಧನ ಭೀತಿಯಿಂದ ತೆರೆಮರೆಯಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಈಗಾಗಲೇ ಮೂರು ಬಾರಿ ವಿಚಾರಣೆಗೆ ಹಾಜರಾದಾಗ ಯುವತಿ ವಿಡಿಯೋ ಹೇಳಿಕೆ ಹಾಗೂ ಎಫ್ಐಆರ್ ಪ್ರತಿ ಬಿಟ್ಟು ಯಾವುದೇ ಸಾಕ್ಷ್ಯ ಎಸ್ಐಟಿ ಬಳಿ ಇರಲಿಲ್ಲ. ಸದ್ಯ ಯುವತಿಯೇ ನೇರವಾಗಿ ನ್ಯಾಯಾಧೀಶರ ಮುಂದೆ 164ರ ಅಡಿ ಸ್ಟೇಟ್ಮೆಂಟ್ ನೀಡಿದ್ದಾಳೆ. ಅಲ್ಲದೇ 161 ರ ಅಡಿ ತನಿಖಾಧಿಕಾರಿ ಮುಂದೆಯೂ ಹೇಳಿಕೆ ನೀಡಿ 300ಕ್ಕೂ ಅಧಿಕ ಪುಟಗಳ ವಾಟ್ಸ್ಆ್ಯಪ್ ಚಾಟ್ ಕೊಟ್ಟಿದ್ದಾಳೆ ಎನ್ನಲಾಗಿದೆ.