ಕರ್ನಾಟಕ

karnataka

By

Published : Apr 2, 2021, 1:48 PM IST

Updated : Apr 2, 2021, 2:40 PM IST

ETV Bharat / state

ಅನಾರೋಗ್ಯ ಹಿನ್ನೆಲೆ ಎಸ್ಐಟಿ ವಿಚಾರಣೆ ರಮೇಶ್ ಜಾರಕಿಹೊಳಿ ಗೈರು

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಅ‌ನಾರೋಗ್ಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ವಕೀಲ ಶ್ಯಾಮ್ ಸುಂದರ್ ಮಾಹಿತಿ ನೀಡಿದ್ದಾರೆ‌. ಇದಕ್ಕೆ ಎಸ್ಐಟಿ ತನಿಖಾಧಿಕಾರಿಗಳು ಪುರಸ್ಕರಿಸಿದ್ದು, ವಿಚಾರಣೆ ಸಂಬಂಧ ಮತ್ತೊಂದು ನೋಟಿಸ್ ನೀಡಲಿದ್ದಾರೆ.

ಅನಾರೋಗ್ಯ ಹಿನ್ನೆಲೆ ಎಸ್ಐಟಿ ವಿಚಾರಣೆ ರಮೇಶ್ ಜಾರಕಿಹೊಳಿ ಗೈರು
ಅನಾರೋಗ್ಯ ಹಿನ್ನೆಲೆ ಎಸ್ಐಟಿ ವಿಚಾರಣೆ ರಮೇಶ್ ಜಾರಕಿಹೊಳಿ ಗೈರು

ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ‌ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಅ‌ನಾರೋಗ್ಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ವಕೀಲ ಶ್ಯಾಮ್ ಸುಂದರ್ ಮಾಹಿತಿ ನೀಡಿದ್ದಾರೆ‌.

ಜಾರಕಿಹೊಳಿ ಪರವಾಗಿ ಆಡುಗೋಡಿಯಲ್ಲಿರುವ ವಿಚಾರಣಾ ಕೇಂದ್ರಕ್ಕೆ ಹಾಜರಾಗಿ ತಮ್ಮ ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ‌ ಇಂದು ವಿಚಾರಣೆ ಹಾಜರಾಗಲು ಸಾಧ್ಯವಾಗುತ್ತಿಲ್ಲ‌. ಹೀಗಾಗಿ ಎರಡು ದಿನಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.

ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್

ಇದಕ್ಕೆ ಎಸ್ಐಟಿ ತನಿಖಾಧಿಕಾರಿಗಳು ಪುರಸ್ಕರಿಸಿದ್ದು, ವಿಚಾರಣೆ ಸಂಬಂಧ ಮತ್ತೊಂದು ನೋಟಿಸ್ ನೀಡಲಿದ್ದಾರೆ.

ಇದನ್ನೂ ಓದಿ: ಆರೋಪಿ ರಮೇಶ್ ತಲೆ ತಪ್ಪಿಸಿಕೊಳ್ಳಲು ಸರ್ಕಾರದ‌ ಸಹಕಾರ : ಕಾಂಗ್ರೆಸ್ ಟ್ವೀಟ್

ಬಂಧನ ಭೀತಿಯಿಲ್ಲ:ಅನಾರೋಗ್ಯ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ರಮೇಶ್ ಜಾರಕಿಹೊಳಿಯವರು ಕಾಣಿಸಿಕೊಂಡಿಲ್ಲ. ಅವರು ಎಲ್ಲಿಯೂ ಓಡಿ ಹೋಗಿಲ್ಲ. ಯಾವುದೇ ರೀತಿಯಿಂದ ಬಂಧನ ಭೀತಿಯಿಲ್ಲ‌.‌ ಅವರು ಈಗ ಗೋಕಾಕ್​​​​ನಲ್ಲಿ‌ ಇದ್ದಾರೆ. ಹೀಗಾಗಿ ಎರಡು ದಿನಗಳ ವಿಚಾರಣೆಗೆ ಹಾಜರಾಗುವುದಿಲ್ಲ. ಒಮ್ಮೆ ವಿಚಾರಣೆಗೆ ಹಾಜರಾದ ಬಳಿಕ ತನಿಖೆಗೆ ಸಹಕಾರ ನೀಡಲಿದ್ದಾರೆ ಎಂದು ವಕೀಲ ಶ್ಯಾಮ್ ಸುಂದರ್ ತಿಳಿಸಿದ್ದಾರೆ.

Last Updated : Apr 2, 2021, 2:40 PM IST

For All Latest Updates

TAGGED:

ABOUT THE AUTHOR

...view details