ಬೆಂಗಳೂರು : ನಗರದ ಹಲವೆಡೆ ಸಂಜೆಯಾಗುತ್ತಿದ್ದಂತೆ ಮಳೆ ಆರ್ಭಟ ಆರಂಭವಾಗಿದೆ. ಯಲಹಂಕ, ದಾಸರಹಳ್ಳಿ, ಮೆಜೆಸ್ಟಿಕ್, ಶೇಷಾದ್ರಿಪುರಂ, ಹೆಬ್ಬಾಳ ಸುತ್ತಮುತ್ತ ಗುಡುಗು - ಮಿಂಚು ಸಹಿತ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ, ನಗರದಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.
ಉದ್ಯಾನ ನಗರಿಯಲ್ಲಿ ಸಂಜೆಯಾಗ್ತಿದಂತೆ ಅಬ್ಬರಿಸಿದ ಮಳೆರಾಯ - ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ನಗರದಲ್ಲಿ ಇಂದು ಸಂಜೆಯಿಂದ ಮತ್ತೆ ಮಳೆ ಸುರಿಯುತ್ತಿದೆ.
ಬೆಂಗಳೂರಿನಲ್ಲಿ ಮಳೆ
ಯಲಹಂಕ ವಲಯದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಈಗಾಗಲೇ ವಲಯದ ಹಲವೆಡೆ 5 ರಿಂದ 16 ಮಿ. ಮೀಟರ್ ಮಳೆಯಾಗಿದೆ. ದಾಸರಹಳ್ಳಿ ವಲಯದಲ್ಲಿ 17.50 ಮಿ.ಮೀ, ಪಶ್ಚಿಮ ವಲಯದಲ್ಲಿ 0 ಯಿಂದ 11.50 ಮಿ.ಮೀ, ಪೂರ್ವ ವಲಯದಲ್ಲಿ 0 ಯಿಂದ 10 ಮಿ.ಮೀ ಮಳೆಯಾಗಿರುವ ಬಗ್ಗೆ ಕೆಎಸ್ಎನ್ಡಿಎಂಸಿಯ ವರುಣಮಿತ್ರ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಇನ್ನು ಮಳೆಯಿಂದ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಮಾಹಿತಿ ನೀಡಿದೆ. ಇಂದು ರಾತ್ರಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ.