ಬೆಂಗಳೂರು: ಕೊರೊನಾ 2ನೇ ಅಲೆ ವ್ಯಾಪಿಸುತ್ತಿರುವ ಆರಂಭದ ದಿನಗಳಿಂದಲೂ ಲಾಕ್ಡೌನ್ ವಿರೋಧಿಸುತ್ತಾ ಬಂದಿರುವ ಪ್ರತಿಪಕ್ಷಕ್ಕೆ ಈಗ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹೇಳಿಕೆ ಇಕ್ಕಟ್ಟಿಗೆ ಸಿಲುಕಿಸುತ್ತದೆ.
ಲಾಕ್ಡೌನ್ ಮಾಡಿದರೆ ಜನಜೀವನ ಅಸ್ತವ್ಯಸ್ತವಾಗಲಿದೆ. ಬಡವರು ಒಂದು ಹೊತ್ತಿನ ಊಟ ಕಳೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರ ಮೊದಲನೇ ಅಲೆ ಸಂದರ್ಭದಲ್ಲಿ ಲಾಕ್ಡೌನ್ ಮಾಡಿ ಹಲವರು ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದೆ. 2ನೇ ಅಲೆ ಸಂದರ್ಭದಲ್ಲೂ ಅದೇ ಪುನರಾವರ್ತನೆ. ಆದರೆ, ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಹಿನ್ನೆಲೆ ಲಾಕ್ಡೌನ್ ಜಾರಿಗೊಳಿಸಬಾರದು ಎಂದು ವಿರೋಧಿಸುತ್ತಾ ಬಂದಿದ್ದರು.
ಆದರೆ, ಇದೀಗ ಏಕಾಏಕಿ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಲಾಕ್ಡೌನ್ ಪರವಾಗಿ ಮಾತನಾಡಿರುವುದು ಪಕ್ಷದ ರಾಜ್ಯ ನಾಯಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ಪರಿಹಾರ ನೀಡುವ ಅನಿವಾರ್ಯತೆ ಎದುರಾಗುತ್ತದೆ ಎಂಬ ಕಾರಣಕ್ಕೆ ಲಾಕ್ಡೌನ್ ಬದಲು ಕರ್ಫ್ಯೂ ಹೆಸರಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಜನರ ಭವಿಷ್ಯ ಘೋರವಾಗಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ಗೆ ಇದೀಗ ಪಕ್ಷದ ರಾಷ್ಟ್ರೀಯ ನಾಯಕರ ಪ್ರತಿಕ್ರಿಯೆ ಬಾಯಿ ಕಟ್ಟುವಂತೆ ಮಾಡಿದೆ.