ಕರ್ನಾಟಕ

karnataka

ETV Bharat / state

ಸಿಸಿಬಿ ಹಿರಿಯ ಅಧಿಕಾರಿಗಳ ‌ಮುಂದೆ ವಿಚಾರಣೆಗೆ ಹಾಜರಾದ ನಟಿ ರಾಗಿಣಿ - actress ragini latest news

ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಇಂದು ದಾಳಿ ಮಾಡಿ ಶಾಕ್ ನೀಡಿದ್ದ ಸಿಸಿಬಿ ಪೊಲೀಸರು ಸದ್ಯ ರಾಗಿಣಿಯನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ‌ ಕಚೇರಿಗೆ ಕರೆತಂದಿದ್ದಾರೆ. ಈಗಾಗಲೇ ಬಂಧನವಾದ ರವಿಶಂಕರ್ ಹಾಗೂ ರಾಗಿಣಿಯನ್ನು ಒಟ್ಟೊಟ್ಟಾಗಿಯೇ ವಿಚಾರಣೆ ನಡೆಸಲಿದ್ದಾರೆ.

Ragini is in CCB office
ಸಿಸಿಬಿ ಹಿರಿಯಾಧಿಕಾರಿಗಳ ‌ಮುಂದೆ ನಟಿ ರಾಗಿಣಿ ಹಾಜರು

By

Published : Sep 4, 2020, 11:24 AM IST

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಘಾಟು ಕೇಳಿ ಬಂದ ಬೆನ್ನಲ್ಲೇ ನಟಿ ರಾಗಿಣಿ ಮನೆ ಮೇಲೆ ಇಂದು ದಾಳಿ ಮಾಡಿ ಶಾಕ್ ನೀಡಿದ್ದ ಸಿಸಿಬಿ ಪೊಲೀಸರು ಸದ್ಯ ರಾಗಿಣಿಯನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ‌ ಕಚೇರಿಗೆ ಕರೆತಂದಿದ್ದಾರೆ.

ಖುದ್ದಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳನ್ನು ಒಳಗೊಂಡಂತೆ ರಾಗಿಣಿಯನ್ನು ವಿಚಾರಣೆ ಮಾಡಲಿದ್ದಾರೆ‌. ಸದ್ಯ ಕಚೇರಿಗೆ ರಾಗಿಣಿ ದ್ವಿವೇದಿ ಕಾರಿನಲ್ಲಿ ಸಿಸಿಬಿ ಅಧಿಕಾರಿಗಳ ಜೊತೆ ಆಗಮಿಸಿದ್ದು, ಅವರಿಗೆ ಡ್ರಗ್ಸ್​ ಕೇಸ್ ಉರುಳಾಗುವ ಸಾಧ್ಯತೆ ಇದೆ.

ರಾಗಿಣಿಯನ್ನು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟಿಲ್ ಹಾಗೂ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಲಿದ್ದು, ಈ ವೇಳೆ ರವಿಶಂಕರ್ ಜೊತೆಗಿನ ನಂಟು, ಡ್ರಗ್ಸ್​ ಮಾಫಿಯಾದ ಬಗ್ಗೆ ಪಿನ್​ ಟು ಪಿನ್ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ನಂತರ ರಾಗಿಣಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಹಾಗೆಯೇ, ಈಗಾಗಲೇ ಬಂಧನವಾದ ರವಿಶಂಕರ್​ಅನ್ನು ಮತ್ತು ರಾಗಿಣಿಯನ್ನು ಒಟ್ಟೊಟ್ಟಾಗಿಯೇ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details