ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ನೇರ ನೇಮಕಾತಿ: ಶಿಕ್ಷಣ ಸಚಿವ ನಾಗೇಶ್ ಮಾಹಿತಿ

ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ನೇರ ನೇಮಕಾತಿ. ಶಿಕ್ಷಣ ಸಚಿವ ನಾಗೇಶ್ ಟ್ವಿಟ್ ಮಾಡಿ ಮಾಹಿತಿ.

ಪಿಯು ಕಾಲೇಜುಗಳ ಉಪನ್ಯಾಸಕರ ನೇರ ನೇಮಕಾತಿ
ಪಿಯು ಕಾಲೇಜುಗಳ ಉಪನ್ಯಾಸಕರ ನೇರ ನೇಮಕಾತಿ

By

Published : Sep 10, 2022, 8:23 PM IST

Updated : Sep 10, 2022, 8:32 PM IST

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, 778 ಉಪನ್ಯಾಸಕರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಸಂಬಂಧ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕನ್ನಡ ವಿಷಯದಲ್ಲಿ 100 ಹುದ್ದೆ, ಇಂಗ್ಲೀಷ್ 120, ಇತಿಹಾಸ 120, ಅರ್ಥಶಾಸ್ತ್ರ 180, ಭೂಗೋಳಶಾಸ್ತ್ರ 20, ವಾಣಿಜ್ಯ ಶಾಸ್ತ್ರ 80, ಸಮಾಜಶಾಸ್ತ್ರ 75, ರಾಜ್ಯಶಾಸ್ತ್ರ 75, ಮನಶಾಸ್ತ್ರ 02, ಗಣಕ ವಿಜ್ಞಾನ 6 ಹುದ್ದೆ ಸೇರಿ ಒಟ್ಟು 778 ವಿವಿಧ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ಕೋರಿದ್ದರು.

(ಇದನ್ನೂ ಓದಿ: 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ 29 ಸಾವಿರ ಶಾಲೆಗಳ ಆಸ್ತಿ ದಾಖಲೆ ಸಮರ್ಪಕ: ಸಚಿವ ನಾಗೇಶ್)

Last Updated : Sep 10, 2022, 8:32 PM IST

ABOUT THE AUTHOR

...view details