ಕರ್ನಾಟಕ

karnataka

ETV Bharat / state

100 ವರ್ಷ ಹಳೆಯ ಪಾಲಿಕೆ ಕೇಂದ್ರ ಕಚೇರಿ ಹೈಟೆಕ್ ಗೊಳಿಸುವುದಕ್ಕೆ ಸಾರ್ವಜನಿಕರ ವಿರೋಧ

ಪಾಲಿಕೆಯ ಕೇಂದ್ರ ಕಚೇರಿ ಕಟ್ಟಡವನ್ನು ಉನ್ನತ ದರ್ಜೆಗೇರಿಸಲು ಪಾಲಿಕೆ ಮುಂದಾಗಿದೆ. ಇದರಿಂದಾಗಿ 100 ವರ್ಷ ಹಳೆಯ ಪಾರಂಪರಿಕ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

public-opposes-renovation-of-100-years-old-bbmp-building
100 ವರ್ಷ ಹಳೆಯ ಪಾಲಿಕೆ ಕೇಂದ್ರ ಕಚೇರಿ ಹೈಟೆಕ್ ಗೊಳಿಸುವುದಕ್ಕೆ ಸಾರ್ವಜನಿಕರ ವಿರೋಧ

By

Published : May 26, 2022, 6:04 PM IST

ಬೆಂಗಳೂರು: ಪಾಲಿಕೆಯ ಕೇಂದ್ರ ಕಚೇರಿ ಕಟ್ಟಡವನ್ನು ಉನ್ನತ ದರ್ಜೆಗೇರಿಸಲು ಪಾಲಿಕೆ ಮುಂದಾಗಿದೆ. ಸುಮಾರು 100 ವರ್ಷಗಳ ಇತಿಹಾಸವಿರುವ ಪಾರಂಪರಿಕ ಕಟ್ಟಡವಾದ ಪಾಲಿಕೆಯ ಕೇಂದ್ರ ಕಚೇರಿಯ ಕಿಟಕಿಗಳನ್ನು ಹೈಟೆಕ್​ಗೊಳಿಸಲು ಪಾಲಿಕೆ ನಿರ್ಧರಿಸಿದೆ. ಕೃಷ್ಣರಾಜ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಕಟ್ಟಿದ್ದ ಈ ಪಾರಂಪರಿಕ ಕೇಂದ್ರ ಕಚೇರಿಯು ತನ್ನ ನೈಜ ಸ್ವರೂಪ ಕಳೆದುಕೊಳ್ಳುತ್ತಿದೆ. ಹೊಸ ಕಿಟಕಿಗಳನ್ನು ಅಳವಡಿಸುತ್ತಿರುವುದರಿಂದ ಪಾರಂಪರಿಕ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

100 ವರ್ಷ ಹಳೆಯ ಪಾಲಿಕೆ ಕೇಂದ್ರ ಕಚೇರಿ ಹೈಟೆಕ್ ಗೊಳಿಸುವುದಕ್ಕೆ ಸಾರ್ವಜನಿಕರ ವಿರೋಧ

1993 ರಲ್ಲಿ ಕೃಷ್ಣರಾಜ ಒಡೆಯರ್ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಟ್ಟಡಕ್ಕೆ ಮತ್ತೆ ಹಳೆಯ ಶೈಲಿಯ ಗಾಜುಗಳನ್ನು ಅಳವಡಿಸಲಿ. ಒಟ್ಟಿನಲ್ಲಿ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯಾಗಬಾರದು ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಹೇಳಿದ್ದಾರೆ.

ಓದಿ :ಡಿಕೆಶಿ ಬಿಟ್ಟು ತುಂಬಾ ಜನ ನಮ್ಮೊಂದಿಗೆ ಬರುವವರಿದ್ದಾರೆ: ನಳಿನ್ ಕುಮಾರ್ ಕಟೀಲ್

For All Latest Updates

TAGGED:

ABOUT THE AUTHOR

...view details