ಬೆಂಗಳೂರು:ಪೌರತ್ವ ಮಸೂದೆ ವಿರೋಧಿಸಿ ಸಿಲಿಕಾನ್ ಸಿಟಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ಶಾಂತಿ ಸಭೆ ನಡೆಸುವ ಹಿನ್ನೆಲೆಯಲ್ಲಿ ಟೌನ್ ಹಾಲ್ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಪೌರತ್ವ ತಿದ್ದು ಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಟೌನ್ ಹಾಲ್ ಸುತ್ತಾ ಖಾಕಿ ಕಣ್ಗಾವಲು - ಬೆಂಗಳೂರು ಸುದ್ದಿ ಟೌನ್ ಹಾಲ್ ಸುತ್ತಾ ಖಾಕಿ ಕಣ್ಗಾವಲು
ಸಿಲಿಕಾನ್ ಸಿಟಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ಶಾಂತಿ ಸಭೆ ನಡೆಸುವ ಹಿನ್ನೆಲೆ ಟೌನ್ ಹಾಲ್ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಟೌನ್ ಹಾಲ್
ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಖಾಕಿ ನಿಯೋಜನೆ ಮಾಡಿದ್ದು, ಒಂದು ಕೆಸ್ಆರ್ಪಿ ತುಕಡಿ, ಬಿಎಂಟಿಸಿ ಬಸ್, 50 ಕ್ಕೂ ಹೆಚ್ಚು ಹೊಯ್ಸಳ ಪೊಲೀಸರ ಮೂಲಕ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಹೀಗಾಗಿ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.
ಇನ್ನು ಟೌನ್ ಹಾಲ್ ಮುಂಭಾಗ ಕೆಲ ಪ್ರತಿಭಟನಕಾರರು ಬಂದು ಪ್ರತಿಭಟನೆ ನಡೆಸುವ ಸಾಧ್ಯತೆ ಕೂಡ ಇದೆ.