ಬೆಂಗಳೂರು: ಆನ್ಲೈನ್ ವ್ಯಾಪಾರ ಮತ್ತು ಸೇವೆಗಳಿಂದ ಎಲ್ಲಾ ವರ್ಗದ ವರ್ತಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಆನ್ ಲೈನ್ ಸಲೂನ್ ಸೇವೆ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಸವಿತಾ ಸಮಾಜದ ಜನರು ಬೆಂಗಳೂರಿನಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಆನ್ಲೈನ್ ಕ್ಷೌರದಂಗಡಿಗಳ ವಿರುದ್ಧ ಸವಿತಾ ಸಮಾಜ ಪ್ರತಿಭಟನೆ - ಆನ್ಲೈನ್ ಕ್ಷೌರದಂಗಡಿಗಳ ವಿರುದ್ಧ ಸವಿತಾ ಸಮಾಜದಿಂದ ಪ್ರತಿಭಟನೆ
ಆನ್ಲೈನ್ ವ್ಯಾಪಾರ ಮತ್ತು ಸೇವೆಗಳಿಂದ ಎಲ್ಲಾ ವರ್ಗದ ವರ್ತಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಆನ್ ಲೈನ್ ಸಲೂನ್ ಸೇವೆ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಸವಿತಾ ಸಮಾಜದ ಜನರು ಪ್ರತಿಭಟನೆ ನಡೆಸಿದ್ದಾರೆ.
ಆನ್ ಲೈನ್ ಸಲೂನ್ ಸರ್ವಿಸ್ ವಿರುದ್ಧ ನಗರದ ಟೌನ್ ಹಾಲ್ ಬಳಿ ಸವಿತಾ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ಬಂದ ನೂರಾರು ಕ್ಷೌರಿಕರು ಭಾಗಿಯಾಗಿ, ಉರುಳು ಸೇವೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದರು. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಸಲೂನ್ ಸೇವೆಯಿಂದ ಬಂಡವಾಳ ಶಾಹಿಗಳ ಹಾವಳಿ ಹೆಚ್ಚಾಗಿದ್ದು, ಕುಲ ಕಸುಬಿಗೆ ಬೆಲೆ ಇಲ್ಲದಂತಾಗಿದೆ. ಈ ಸೇವೆಗೆ ಸರ್ಕಾರ ಕೂಡಲೇ ಕಡಿವಾಹ ಹಾಕಬೇಕೆಂದು ಒತ್ತಾಯಿಸಿದರು.
ಕುಲಕಸುಬಾದ ಕ್ಷೌರ ಕೆಲಸವನ್ನು ನೆಚ್ಚಿ ಅನೇಕ ಕುಟುಂಬಗಳು ಜೀವ ನಡೆಸುತ್ತಿದ್ದು, ಉತ್ತರಭಾರತದಿಂದ ಜನರನ್ನು ಕರೆಸಿ ಆನ್ಲೈನ್ ಸಲೂನ್ ಅಂತೆಲ್ಲಾ ನಮ್ಮ ಕೆಲಸಕ್ಕೆ ಅಡ್ಡಿ ಮಾಡಲಾಗುತ್ತಿದೆ. ಇದರಿಂದ ಒಂದು ಹೊತ್ತು ಊಟ ಮಾಡಲು ಪರದಾಡುವಂತೆ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.