ಬೆಂಗಳೂರು: ಮೋಟಾರು ವಾಹನ ಕಾಯ್ದೆ 1988 ಅನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಬೆಂಗಳೂರು ವಕೀಲರ ಸಂಘದಿಂದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ವಾಹನ ಸವಾರರಿಗೆ ಅಪಘಾತಗಳಾದ ಸಂದರ್ಭದಲ್ಲಿ, ವಿಮಾ ಕಂಪನಿಗಳಿಗೆ ಅನುಕೂಲವಾಗುವಂತೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ವಕೀಲರ ಪ್ರತಿಭಟನೆ ಅಪಘಾತವಾದರೆ ತಕ್ಷಣ ಪರಿಹಾರ ಸಿಗುವುದಿಲ್ಲ. ಅಲ್ಲದೆ ಅಪಘಾತಕ್ಕೆ ಚಾಲಕನೇ ಹೊಣೆಗಾರನಾದರೆ ಆತನ ಸ್ವಯಂ ನಿರ್ಲಕ್ಷ್ಯದ ಕಾರಣಕ್ಕೆ ವಿಮಾ ಕಂಪನಿಯಿಂದ ಪರಿಹಾರ ದೊರಕುವುದಿಲ್ಲ ಎಂದು ತಿದ್ದುಪಡಿ ಮಾಡಲಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರದ ತಂದ ಕಾಯ್ದೆ ತಿದ್ದುಪಡಿಯು ಜನರ ಹಿತದೃಷ್ಟಿಯಿಂದ ಮಾಡಿರುವುದಲ್ಲ. ವಿಮಾ ಕಂಪನಿಗಳ ಹಿತದೃಷ್ಟಿಯಿಂದ ಮಾಡಲಾಗಿದೆ. ಕಾಯ್ದೆ ತಿದ್ದುಪಡಿಗೆ ವಕೀಲರ ಸಂಘಟನೆಗಳಿಂದ ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ. ಏಕಾಏಕಿ ಜನರಿಗೆ ಮಾರಕವಾಗುವಂತಹ ತಿದ್ದುಪಡಿ ತಂದಿದೆ ಎಂದರು.
ಜನಸಮಾನ್ಯರ ವಿರೋಧಿ ಕಾಯ್ದೆಯಾಗಿದ್ದು, ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಎಲ್ಲಾ ಆಟೋ, ಲಾರಿ ಚಾಲಕರು ಹಾಗೂ ವಕೀಲರು ಉಗ್ರ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ರಂಗನಾಥ್ ಎಚ್ಚರಿಕೆ ನೀಡಿದರು.