ಆನೇಕಲ್: ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚೆನ್ನಣ್ಣನವರ್ ಜಿಲ್ಲೆಯ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ನೊಂದವರ ಪರ ಭರವಸೆಗಳನ್ನಿಟ್ಟುಕೊಂಡಿದ್ದೆವು, ಕಾಲ ಕಳೆದಂತೆ ಅದೆಲ್ಲ ಸುಳ್ಳು ಎಂದು ಸಾಬೀತಾಗಿವೆ ಎಂದು ದಲಿತ ಪರ ಸಂಘಟನೆಗಳ ಮುಖಂಡರು ಎಸ್ಪಿ ಕುರಿತು ಆರೋಪ ವ್ಯಕ್ತಪಡಿಸಿದ್ದಾರೆ.
ಎಸ್ಪಿ ಚೆನ್ನಣ್ಣನವರ್ ಮೇಲಿನ ನಿರೀಕ್ಷೆಗಳು ಹುಸಿ; ದಲಿತ ಸಂಘಟನೆ ಅಸಮಾಧಾನ
ಎಸ್ಪಿ ರವಿ ಡಿ.ಚೆನ್ನಣ್ಣನವರ್ ವಿರುದ್ಧ ದಲಿತ ಪರ ಸಂಘಟನೆಗಳ ಮುಖಂಡರು ಆರೋಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಆನೇಕಲ್ ಉಪವಿಭಾಗದಲ್ಲಿ ಒಂದರ ಹಿಂದೆ ಒಂದರಂತೆ ಕೊಲೆಗಳು ನಡೆದಿವೆ. ಜಾತಿ ದೌರ್ಜನ್ಯಗಳ ಸಂಖ್ಯೆ ಇಳಿದಿಲ್ಲ, ಬದಲಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಾಗಿ ಪೊಲೀಸ್ ಠಾಣೆಗಳು ಕೆಲಸ ಮಾಡಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನೀಡಿರುವ ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳನ್ನು ಈವರೆಗೂ ಇತ್ಯರ್ಥಪಡಿಸಿ ಚಾರ್ಜ್ ಶೀಟ್ ಸಲ್ಲಿಸದೆ ನೊಂದವರಿಗೆ ನ್ಯಾಯ ದೊರಕಿಸುವ ಕೆಲಸವಾಗಿಲ್ಲವೆಂದು ದೂರುತ್ತಿದ್ದಾರೆ. ಇಷ್ಟೆಲ್ಲಕ್ಕೂ ನೇರವಾಗಿ ಎಸ್ಪಿ ಹೊಣೆಯಾಗಿದ್ದು ಕೂಡಲೇ ತಮ್ಮ ನಡೆ ಬದಲಾಯಿಸಿಕೊಳ್ಳದಿದ್ದಲ್ಲಿ ಐಜಿಪಿ ಹಂತಕ್ಕೆ ದೂರು ನೀಡುವುದಲ್ಲದೆ ಉಳಿದ ಸಂಘಟನೆಗಳ ನೇತೃತ್ಬದಲ್ಲಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.