ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 1,376 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 3,368 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 27 ರ ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಬೆಂಗಳೂರು ದಕ್ಷಿಣ, ಆನೇಕಲ್ ಹಾಗೂ ಪೂರ್ವ ತಾಲೂಕಿನ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳು ಹಾಗೂ ಮತಎಣಿಕೆಗಾಗಿ ಬೆಂಗಳೂರು ದಕ್ಷಿಣ ತಾಲೂಕಿಗೆ ಆರ್.ವಿ. ಇಂಜಿನಿಯರಿಂಗ್ ಕಾಲೇಜು ಹಾಗೂ ಕೆಂಗೇರಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರು ಪೂರ್ವಕ್ಕೆ ಐ.ಟಿ.ಐ ವಿದ್ಯಾಮಂದಿರ ಕೆ.ಆರ್. ಪುರದಲ್ಲಿ ಹಾಗೂ ಆನೇಕಲ್ ತಾಲೂಕಿಗೆ ಎ.ಎಸ್.ಬಿ. ಜೂನಿಯರ್ ಕಾಲೇಜು, ಆನೇಕಲ್ ಟೌನ್, ಅತ್ತಿಬೆಲೆ ರಸ್ತೆ, ಆನೇಕಲ್ನಲ್ಲಿ ಮಸ್ಟರಿಂಗ್ ಸೆಂಟರ್ ಗುರುತಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 5,58,127 ಮತದಾರರಿದ್ದು, ಇದರಲ್ಲಿ 2,87,765 ಮಂದಿ ಪುರುಷರು, 2,70,275 ಮಂದಿ ಮಹಿಳೆಯರು ಹಾಗೂ 90 ಇತರೆ ಮತದಾರರಿದ್ದಾರೆ.
ಒಟ್ಟು ಮತಗಟ್ಟೆಗಳ ವಿವರ
ಬೆಂಗಳೂರು ದಕ್ಷಿಣ ತಾಲೂಕು
ಮೂಲ - 152
ಹೆಚ್ಚುವರಿ - 51
ಒಟ್ಟು - 203
ಇದರಲ್ಲಿ 37 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಬೆಂಗಳೂರು ಪೂರ್ವ ತಾಲೂಕು
ಮೂಲ - 97
ಹೆಚ್ಚುವರಿ - 59
ಒಟ್ಟು - 156