ಕರ್ನಾಟಕ

karnataka

ETV Bharat / state

ಲೋಕ ಸಮರದ ಮತ ಎಣಿಕೆಗೆ ಚುನಾವಣಾ ಆಯೋಗ ಸಜ್ಜು

ನಾಳೆ ಬೆಳಗ್ಗೆ 8 ಗಂಟೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ. ಈ ಮೊದಲು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಬೇಕಿದ್ದ ಫಲಿತಾಂಶವು, ನಾಲ್ಕು ಗಂಟೆಗಳ ಕಾಲ ತಡವಾಗಬಹುದು. ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಪ್ರಕಟಣೆ ಪ್ರಾರಂಭವಾಗುವ ನಿರೀಕ್ಷೆ ಇದೆ ಅಂತ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಲೋಕ ಸಮರದ ಮತ ಎಣಿಕೆಗೆ ಚುನಾವಣಾ ಆಯೋಗ ಸಜ್ಜು

By

Published : May 22, 2019, 2:02 AM IST

ಬೆಂಗಳೂರು:ಲೋಕಸಭಾ ಚುನಾವಣೆಯ ಫಲಿತಾಂಶ ಇದೇ 23 ರಂದು ಪ್ರಕಟಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವೂ ಸಜ್ಜಾಗಿದ್ದು, ಇಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಟಿ ನಡೆಸಿದರು.

ಮೇ.23 ರಂದು ಬೆಳಗ್ಗೆ 8 ಗಂಟೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ. ಈ ಮೊದಲು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಬೇಕಿದ್ದ ಫಲಿತಾಂಶವು, ನಾಲ್ಕು ಗಂಟೆಗಳ ಕಾಲ ತಡವಾಗಬಹುದು. ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಪ್ರಕಟಣೆ ಪ್ರಾರಂಭವಾಗುವ ನಿರೀಕ್ಷೆ ಇದೆ ಅಂತ ತಿಳಿಸಿದರು.

ಮತ ಎಣಿಕೆಗಾಗಿ 28 ಮತ ಕೇಂದ್ರಗಳನ್ನು ಸಿದ್ದಪಡಿಸಲಾಗಿದೆ. ಮತ ಎಣಿಕೆಗೆ 3224 ಟೇಬಲ್ ಗಳು ಮತ್ತು 11,000ಕ್ಕೂ ಹೆಚ್ಚು ಮತ ಎಣಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಅಂತ ಮಾಹಿತಿ ನೀಡಿದರು.

ಲೋಕ ಸಮರದ ಮತ ಎಣಿಕೆಗೆ ಚುನಾವಣಾ ಆಯೋಗ ಸಜ್ಜು

ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ 40 ವಿವಿ ಪ್ಯಾಟ್ ಮತ ಯಂತ್ರಗಳ ಎಣಿಕೆ ಮಾಡಬೇಕು. ಇದರಿಂದಾಗಿ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ರಾತ್ರಿ 7 ಗಂಟೆಗೆ 28 ಕ್ಷೇತ್ರಗಳ ಫಲಿತಾಂಶ ಪ್ರಕಟಣೆ ಆಗಬಹುದು. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಆದಷ್ಟು ಬೇಗ ಫಲಿತಾಂಶ ಪ್ರಕಟಣೆಗೆ ಪ್ರಯತ್ನಿಸುತ್ತೇವೆ ಅಂತ ಮಾಹಿತಿ ನೀಡಿದರು.

ಇನ್ನು ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದರಂತೆ ವಿವಿ ಪ್ಯಾಟ್ ಮತಯಂತ್ರಗಳ ಮತಗಳನ್ನು ಎಣಿಕೆ ಮಾಡಿ, ಇವಿಎಂ ಯಂತ್ರಗಳ ಮತಗಳ ಜೊತೆ ತಾಳೆ ಮಾಡಿ ತೋರಿಸಲಾಗುತ್ತದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 98,606 ಅಂಚೆ ಮತಗಳು ಬಂದಿವೆ. ಈ ಬಾರಿ ಎಲೆಕ್ಟ್ರಾನಿಕ್ ಪೋಸ್ಟಲ್ ಬ್ಯಾಲೆಟ್ಗೂ ಅವಕಾಶ ಕೊಟ್ಟ ಕಾರಣದಿಂದ ಮತ ಪ್ರಮಾಣ ಹೆಚ್ಚಾಗಿದೆ ಎಂದರು.

ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಅಂಚೆ ಮತಪತ್ರಗಳ ಎಣಿಕೆ ಬಳಿಕ ಇವಿಎಂಗಳಲ್ಲಿನ ಮತ ಎಣಿಕೆ ಆರಂಭವಾಗುತ್ತದೆ.

ಮತದಾನದಂದು ಸೆರೆಹಿಡಿದ ಅತ್ಯುತ್ತಮ ಛಾಯಾಚಿತ್ರ ಕ್ಕೆ ಬಹುಮಾನ

ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಮತದಾನದ ದಿನದಂದೇ ಸೆರೆಹಿಡಿಯಲಾಗಿದ್ದ ಅತ್ಯುತ್ತಮ 5 ಛಾಯಾಚಿತ್ರಗಳನ್ನ ಬಹುಮಾನಕ್ಕಾಗಿ ಚುನಾವಣಾ ಆಯೋಗ ಆಯ್ಕೆ ಮಾಡಿದೆ. ಆಯ್ಕೆಗೊಂಡ ಫೋಟೋಗಳನ್ನ‌ ಸಭೆಯಲ್ಲಿಯೇ ಬಿಡುಗಡೆ ಮಾಡಿದರು. ಇನ್ನು ಫೋಟೋ ತೆಗೆಯುವ ಮುನ್ನ ಆಯೋಗವು ಕಲವು ಷರತ್ತುಗಳನ್ನು ವಿಧಿಸಲಾಗಿತ್ತು. ಫೋಟೋಗಳು ರಾಜಕೀಯ ಪಕ್ಷ, ಪ್ರಚಾರ, ಅಭ್ಯರ್ಥಿ, ಚಿಹ್ನೆಗಳನ್ನು ಒಳಗೊಂಡಿರಬಾರದೆಂದು ಹೇಳಲಾಗಿತ್ತು.

ABOUT THE AUTHOR

...view details