ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಡ್ರಗ್ಸ್ ಅವ್ಯವಹಾರಗಳ ಕುರಿತಂತೆ ಮಾಹಿತಿ ನೀಡಲು ಇಂದು ಸಿಸಿಬಿ ಕಚೇರಿಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಆಗಮಿಸಲಿದ್ದಾರೆ.
ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಪ್ರಶಾಂತ್ ಸಂಬರಗಿ ಹಾಜರು - ಪ್ರಶಾಂತ್ ಸಂಬರಗಿ
ಡ್ರಗ್ಸ್ ಅವ್ಯವಹಾರಗಳ ಕುರಿತಂತೆ ಮಾಹಿತಿ ನೀಡಲು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇಂದು ಸಿಸಿಬಿ ಕಚೇರಿಗೆ ಆಗಮಿಸಲಿದ್ದಾರೆ.
ಶ್ರೀಲಂಕಾದಲ್ಲಿ ಯಾರ‍್ಯಾರು ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲು ಇಂದು ಬೆಳಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಬಂದು ತನಿಖಾಧಿಕಾರಿಗಳ ಮುಂದೆ ಮಾಹಿತಿ ನೀಡಲಿದ್ದಾರೆ. ಅದೇ ರೀತಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವವರ ಹೆಸರುಗಳನ್ನೂ ಅಧಿಕಾರಿಗಳ ಮುಂದೆ ಹೇಳಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಡ್ರಗ್ಸ್ ಪಾರ್ಟಿಯಲ್ಲಿ ಸಂಜನಾ ಸಹ ಭಾಗಿಯಾಗಿದ್ದರು ಎಂದು ಸಂಬರಗಿ ಹೇಳಿಕೆ ನೀಡಿದ್ದರು. ಇವರ ವಿರುದ್ಧ ಸಂಜನಾ ಗುಡುಗಿದ್ದರು. ಸದ್ಯ ಸಂಜನಾ ಹಾಗೂ ರಾಗಿಣಿ ಸಿಸಿಬಿ ಬಂಧನದಲ್ಲಿದ್ದಾರೆ. ಸಿಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆ ಇಂದು ತನಿಖಾಧಿಕಾರಿಗಳ ಮುಂದೆ ಪ್ರಶಾಂತ್ ಸಂಬರಗಿ ಹಾಜರಾಗಲಿದ್ದಾರೆ.