ಬೆಂಗಳೂರು :ಹಲವಾರು ವರ್ಷಗಳಿಂದ ಸುಣ್ಣ-ಬಣ್ಣ ಕಾಣದೇ ಪಾಳುಬಿದ್ದ ಕಟ್ಟಡವೆಂದು ಭಾಸವಾಗುತ್ತಿರುವ ಸರಕಾರಿ ಶಾಲೆ - ಕಾಲೇಜುಗಳಿಗೆ ಬಣ್ಣ ಬಳಿದು ನವ ವಧುವಿ ರೀತಿ ಕಂಗೊಳಿಸುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಂದಾಗಿದ್ದಾರೆ. ಇದಕ್ಕಾಗಿ ಬಣ್ಣ ದರ್ಪಣ ಎಂಬ ಅಭಿಯಾನ ಆರಂಭಿಸಿದ್ದು, ವರ್ಷದಲ್ಲಿ ಕ್ಷಮತಾ ಸೇವಾ ಸಂಸ್ಥೆ ಸಹಬಾಗಿತ್ವದೊಂದಿಗೆ ಧಾರವಾಡ ಲೋಕಸಭೆ ಕ್ಷೇತ್ರದ 1,130 ಶಾಲೆಗಳಿಗೆ ಬಣ್ಣ ಬಳಿಯುವ ಕಾರ್ಯಕ್ರಮ ರೂಪಿಸಿದ್ದಾರೆ. ಈ ಅಭಿಯಾನಕ್ಕೆ ಕೈ ಜೋಡಿಸುವಂತೆ ಜೋಶಿ ಮನವಿ ಮಾಡಿದ್ದಾರೆ.
ಬಣ್ಣ ನಮ್ಮದು, ಶಾಲೆ ಮತ್ತು ಸಹಾಯ ನಿಮ್ಮದು : ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಬಣ್ಣಗಳನ್ನು ಕ್ಷಮತಾ ಸಂಸ್ಥೆ ಮೂಲಕ ಉಚಿತವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒದಗಿಸಲಿದ್ದಾರೆ. ಆದರೆ ಶಾಲೆಯ ಗೋಡೆಗಳಿಗೆ ಪೇಂಟಿಂಗ್ ಮಾಡಿಸುವ ಜವಾಬ್ದಾರಿಯನ್ನು ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣದರ್ಪಣೆ ಅಭಿಯಾನ ಆರಂಭಿಸಿರುವ ಕೇಂದ್ರ ಸಚಿವ ಜೋಶಿ, ಬಣ್ಣ ನಮ್ಮದು, ಶಾಲೆ ಮತ್ತು ಸಹಾಯ ನಿಮ್ಮದು, ಬನ್ನಿ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ. ಬಣ್ಣದರ್ಪಣೆ ಅಭಿಯಾನಕ್ಕೆ ನಟ ರಮೇಶ್ ಅರವಿಂದ ಬೆಂಬಲಿಸಿದ್ದಾರೆ.