ಬೆಂಗಳೂರು:ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗೆ ನೆರವಾಗಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ರಾಜ್ಯ ಘಟಕದಿಂದ ಲಕ್ಷಾಂತರ ರೂ. ಮೌಲ್ಯದ ಪಿಪಿಇ ಕಿಟ್‌ಗಳನ್ನು ವಿತರಿಸಲಾಯಿತು.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ಡಾ.ಆರ್. ಪಾಟೀಲ್ ಓಂ ಪ್ರಕಾಶ್ ಅವರನ್ನು ಭೇಟಿ ಮಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ನೇತೃತ್ವದ ನಿಯೋಗ ಪಿಪಿಇ ಕಿಟ್‌ಗಳನ್ನು ನೀಡಿದೆ. ಕೊರೊನಾ ಸೋಂಕು ರಾಜ್ಯ ಪ್ರವೇಶಿಸಿದ ಬಳಿಕ ಬಡವರಿಗೆ, ನಿರ್ಗತಿಕರಿಗೆ ಉಚಿತ ಪಡಿತರ ಆಹಾರ ನೀಡುತ್ತಿದೆ. ತನ್ನ ವೈದ್ಯಕೀಯ ವಿಭಾಗದ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ರಕ್ತದಾನ, ಮೆಡಿಚೈನ್ ಮೂಲಕ ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ಮಟ್ಟದಲ್ಲಿ ಅಗತ್ಯ ಔಷಧಗಳ ಪೂರೈಕೆ ಮಾಡಲು ಅಗತ್ಯ ನೆರವು ನೀಡುತ್ತಿದೆ.
ಪಿಎಫ್ಐನಿಂದ ಕೊರೊನಾ ವಾರಿಯರ್ಸ್ಗೆ ಪಿಪಿಇ ಕಿಟ್ ವಿತರಣೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಘಟಕದಿಂದ ಲಕ್ಷಾಂತರ ರೂ. ಮೌಲ್ಯದ ಪಿಪಿಇ ಕಿಟ್‌ಗಳನ್ನು ಕೊರೊನಾ ವಾರಿಯರ್ಸ್ಗೆ ವಿತರಿಸಲಾಯಿತು.
ಪಿಎಫ್ಐನಿಂದ ಕೊರೊನಾ ವಾರಿಯರ್ಸ್ಗೆ ಪಿಪಿಇ ಕಿಟ್ ವಿತರಣೆ
ಕೊರೊನಾ ವಾರಿಯರ್ಸ್ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳ ವಿತರಣೆ ಮಾಡಿಕೊಂಡು ಬಂದಿದ್ದ ಈ ಸಂಘಟನೆ ಇದೀಗ ಆರೋಗ್ಯ ಇಲಾಖೆಗೆ ಪಿಪಿಇ ಕಿಟ್‌ಗಳನ್ನು ನೀಡಿದೆ.