ಬೆಂಗಳೂರು:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಇಂದು ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ಹಾಗಾಗಿ ಇಂದು ಹಲವೆಡೆ ಜಾಥಾ ಮತ್ತು ಕೆಲವೊಂದು ಕಡೆ ಪ್ರತಿಭಟನೆಗಳ ಕಾವು ಹೆಚ್ಚಾಗುತ್ತಿದೆ. ಇದನ್ನು ಅರಿತು ಎಚ್ಚೆತ್ತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಇಂದು ನಿಗದಿಯಾಗಿದ್ದಂತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಮುಂದೂಡಿದೆ.
ಭಾರತ್ ಬಂದ್ ಹಿನ್ನೆಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೈಹಿಕ ಪರೀಕ್ಷೆ ಮುಂದೂಡಿಕೆ - Sub Inspector of Police
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಇಂದು ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿರುವ ಹಿನ್ನೆಲೆ ಇಂದು ನಿಗದಿಯಾಗಿದ್ದಂತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೈಹಿಕ ಪರೀಕ್ಷೆಯನ್ನ ಇದೇ ತಿಂಗಳು 27ಕ್ಕೆ ಮುಂದೂಡಲಾಗಿದೆ.
postponement-of-police-physical-examination
ವಿವಿಧ ಕಡೆ ವಿವಿಧ ಕವಾಯತು ಮೈದಾನದಲ್ಲಿ ಇಂದಿಗೆ ಪರೀಕ್ಷೆ ನಿಗದಿಯಾಗಿತ್ತು. ಆದರೆ ಎಲ್ಲೆಡೆ ಪ್ರತಿಭಟನೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ದಿನಾಂಕವನ್ನು ಬದಲಿಸಿದ ಅಧಿಕಾರಿಗಳು, ಇದೇ ತಿಂಗಳು 27ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಮತ್ತೊಂದೆಡೆ ಯಾವುದೇ ಪ್ರಕಟಣೆಗಳಿಲ್ಲದೆ ಪರೀಕ್ಷೆ ಮೂಂದೂಡಿಕೆಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ವಿಚಾರ ತಿಳಿಯದೆ ಪರೀಕ್ಷೆಗೆ ಹಾಜರಾಗಿದ್ದರು.