ಬೆಂಗಳೂರು: ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಮೇಲೆ ‘POLICE’ ಎಂದು ಬರೆಸಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದ ಯುವಕನನ್ನು ಕೆಆರ್ ಪುರಂ ಸಂಚಾರಿ ಠಾಣಾ ಪೊಲೀಸರು ತಡೆದು ವಿಚಾರಣೆ ನಡೆಸಿದ್ದಾರೆ.
ನಂಬರ್ ಪ್ಲೇಟ್ನಲ್ಲಿ ‘POLICE’ ಬರಹ: ಬಿಸಿ ಮುಟ್ಟಿಸಿದ ಪೊಲೀಸರು
ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಮೇಲೆ ‘POLICE’ ಎಂದು ಬರೆಸಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದ ಯುವಕನಿಗೆ 2000 ರೂ.ದಂಡ ವಿಧಿಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ನಿವಾಸಿ ಕುಮಾರ್ ಎಂಬಾತ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದಾನೆ. ಬೈಕ್ಗೆ ‘POLICE’ ಅಂತ ಸ್ಟಿಕ್ಕರ್ ಹಾಕಿದರೆ ವಾಹನವನ್ನು ಯಾರೂ ತಡೆಯುವುದಿಲ್ಲ. ಹೀಗಾಗಿ ನಂಬರ್ ಬದಲು ಪೊಲೀಸ್ ಎಂದು ಬರೆಯಿಸಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದ. ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕೆಆರ್ ಪುರಂ ಕೆರೆ ಬಳಿ ಗಸ್ತಿನಲ್ಲಿದ್ದ ಸಬ್ಇನ್ಸ್ಪೆಕ್ಟರ್ ನಿಜಾಮುದ್ದಿನ್ ತಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಬೈಕ್ಗೆ ನಂಬರ್ ಇಲ್ಲದಿರುವುದನ್ನು ಕಂಡು 2000 ರೂ. ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಘಟನೆ ಬಗ್ಗೆ ಕೆ.ಆರ್.ಪುರಂ ಪೊಲೀಸರು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.