ಕರ್ನಾಟಕ

karnataka

By

Published : Mar 28, 2021, 11:04 AM IST

Updated : Mar 28, 2021, 12:28 PM IST

ETV Bharat / state

ಕೈ ಕಾರ್ಯಕರ್ತರ ಪ್ರತಿಭಟನೆ ಸಾಧ್ಯತೆ: ಸಿಎಂ ಬಿಎಸ್​ವೈ, ಜಾರಕಿಹೊಳಿ ನಿವಾಸದ ಸುತ್ತ ಪೊಲೀಸ್ ಸರ್ಪಗಾವಲು

ಬೆಂಗಳೂರಿನ ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸದ ಬಳಿ ಸುಮಾರು 100ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದು ಬಿಗಿ ಭದ್ರತೆ ಒದಗಿಸಿದ್ದಾರೆ. ಅಷ್ಟೇ ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರ ಗೃಹ ಕಚೇರಿ ಹಾಗೂ ಅಧಿಕೃತ ನಿವಾಸಕ್ಕೂ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

Police tight security
ಜಾರಕಿಹೊಳಿ ನಿವಾಸದ ಸುತ್ತ ಪೊಲೀಸ್ ಭದ್ರತೆ

ಬೆಂಗಳೂರು:ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನಾಯಕರ ನಡುವೆ ವಾಕ್ಸಮರ ಏರ್ಪಟ್ಟಿದ್ದರೂ ಸಹ, ಬಳಿಕ ರಮೇಶ್​ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದ ಬಳಿ ವ್ಯಾಪಕ ಭದ್ರತೆ ಒದಗಿಸಲಾಗಿದೆ.

ಬೆಂಗಳೂರಿನ ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸದ ಬಳಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ರಮೇಶ್ ನಿವಾಸದ ರಸ್ತೆಯ ಎರಡೂ ದಿಕ್ಕುಗಳಲ್ಲಿ ಬ್ಯಾರಿಕೇಡ್​ಗಳನ್ನ ಹಾಕಿ ಬಿಗಿ ಭದ್ರತೆ ಒದಗಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಈಗಾಗಲೇ ಮಾಡಲಾಗಿದೆ.

ಜಾರಕಿಹೊಳಿ ನಿವಾಸದ ಸುತ್ತ ಪೊಲೀಸ್ ಭದ್ರತೆ

ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗೃಹ ಕಚೇರಿ ಹಾಗೂ ಅಧಿಕೃತ ನಿವಾಸಕ್ಕೂ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕುಮಾರಪಾರ್ಕ್ ಈಸ್ಟ್​ನಲ್ಲಿರುವ ಸಿಎಂ‌‌ ಗೃಹ ಕಚೇರಿ ಕೃಷ್ಣಾ ಹಾಗು ಅಧಿಕೃತ ನಿವಾಸ ಕಾವೇರಿಗೆ ಪ್ರೋಟೋಕಾಲ್ ಜೊತೆಗೆ ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಗೃಹ ಕಚೇರಿ ಮತ್ತು ನಿವಾಸ ಎರಡೂ ಕಡೆ ತಲಾ ಒಂದೊಂದು ಕೆಎಸ್ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಸಿಎಂ ಬಿಎಸ್​ವೈ ನಿವಾಸಕ್ಕೆ ಭದ್ರತೆ

ಇದನ್ನೂ ಓದಿ:ಡಿಕೆಶಿ ವಿರುದ್ಧ ಅವಾಚ್ಯ ಪದ ಬಳಕೆ.. ವಿಷಾದಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಕಳೆದ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದೂ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ರಮೇಶ್ ಜಾರಕಿಹೊಳಿ ಸದಾಶಿವನಗರದ ನಿವಾಸದ ಸನಿಹದಲ್ಲೇ ಡಿಕೆಶಿ ಹಾಗೂ ಆರೋಗ್ಯ ಸಚಿವ ಸುಧಾಕರ್ ನಿವಾಸಗಳಿದ್ದು ಅಲ್ಲಿಯೂ ಸಹ ಹೆಚ್ಚಿನ ಪೊಲೀಸ್ ಹಾಗೂ ಮೀಸಲು ಪಡೆಯ ಭದ್ರತೆ ಒದಗಿಸಲಾಗಿದೆ. ಸುಮಾರು 100ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Last Updated : Mar 28, 2021, 12:28 PM IST

ABOUT THE AUTHOR

...view details