ಬೆಂಗಳೂರು: ಮಧ್ಯರಾತ್ರಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಸಿಲಿಕಾನ್ ಸಿಟಿ ಯುವಕರ ಸುಮಾರು 70 ಬೈಕ್ಗಳನ್ನ ಪೊಲಿಸರು ಸೀಜ್ ಮಾಡಿದ್ದಾರೆ.
ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದಲ್ಲಿ ಸಮುದಾಯದವೊಂದರ ಯುವಕರು ಬೆಂಗಳೂರಿನಿಂದ ಲಾಂಗ್ ಡ್ರೈವ್ ಬಂದು ಸ್ಥಳೀಯರಿಗೆ ಕಾಟ ಕೊಡುತ್ತಿದ್ದರಂತೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು, ನಿನ್ನೆ ರಾತ್ರಿ ಸಹ ಇದೇ ರೀತಿ ಮಾಡಲು ಬಂದ ಯುವಕರಿಗೆ ಶಾಕ್ ನೀಡಿದ್ದಾರೆ.
ಮಧ್ಯರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರಿಗೆ ಪೊಲೀಸರ ಶಾಕ್... ಮಧ್ಯರಾತ್ರಿ ವೀಕೆಂಡ್ ಜೋಶ್ನಲ್ಲಿ ಯುವಕರು ಹೈವೆಯಲ್ಲಿ ವ್ಹೀಲಿಂಗ್ ಮಾಡುತ್ತಾ ವಾಹನ ಸವಾರರಿಗೆ ಕ್ವಾಟ್ಲೆ ಕೊಡುತ್ತಿದ್ದರು.
ಹೀಗಾಗಿ ಕಳೆದ ರಾತ್ರಿ ಬೆಂಗಳೂರು-ಚೆನ್ನೈನ ರಾಷ್ಟ್ರಿಯ ಹೆದ್ದಾರಿ 75 ರಲ್ಲಿ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಮತ್ತು ನಂದಗುಡಿ ಪೊಲೀಸರು, ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ಪುಂಡರ 70 ಕ್ಕೂ ಅಧಿಕ ಬೈಕ್ಗಳನ್ನ ಸೀಜ್ ಮಾಡಿ ಪುಂಡರಿಗೆ ಬಿಸಿ ಮುಟ್ಟಿಸಿದ್ದಾರೆ.
ವ್ಹೀಲಿಂಗ್ ಮಾಡಲು ಬೈಕ್ ಕಳ್ಳತನ
ವ್ಹೀಲಿಂಗ್ಬೈಕ್ಗಳನ್ನ ಸೀಜ್ ಮಾಡಿದ್ದನ್ನ ತಿಳಿದು ನೋಡಲು ಬಂದ ಯುವಕನೋರ್ವನಿಗೆ ಕಳೆದ 8 ತಿಂಗಳ ಹಿಂದೆ ಬೆಂಗಳೂರಿನ ಟಿನ್ ಪ್ಯಾಕ್ಟರಿಯಲ್ಲಿ ಕಳುವಾಗಿದ್ದ ತನ್ನ ಆರ್ ಎಕ್ಸ್ ಬೈಕ್ ಸಿಕ್ಕಿದ್ದು, ಪುಲ್ ಖುಷಿಯಾಗಿದ್ದಾನೆ.