ಕರ್ನಾಟಕ

karnataka

ETV Bharat / state

ಮನೆ ಬಾಡಿಗೆ ಕಟ್ಟದ ಆರೋಪ ಪ್ರಕರಣ- ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್

'ಮನೆ ಬಾಡಿಗೆ ಕೇಳಿದ್ದಕ್ಕಾಗಿ ನಟ ಆದಿತ್ಯ ಅವರ ತಂದೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಜೀವ ಬೆದರಿಕೆ ಹಾಕಿದ್ದಾರೆ' ಎಂದು ಆರೋಪಿಸಿ ಮನೆಯ ಮಾಲೀಕ ಜಿ.ಆರ್.ಪ್ರಸನ್ನ ಎಂಬುವರು ನಗರ ಪೊಲೀಸ್​ ಕಮಿಷನರ್​ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

ಸಂಗ್ರಹ ಚಿತ್ರ

By

Published : May 15, 2019, 9:23 AM IST

ಬೆಂಗಳೂರು: ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್​​ ಬಾಬು ಅವರಿಗೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನು ಓದಿ: ರಾಜೇಂದ್ರಸಿಂಗ್ ಬಾಬು ಬಾಡಿಗೆ ವಿವಾದ: ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ ಮನೆ ಮಾಲೀಕ

ಘಟನೆ ನಡೆದ ನಂತರ ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಇದಕ್ಕೆ ಕ್ಯಾರೆ ಅನ್ನದ ರಾಜೇಂದ್ರ ಸಿಂಗ್ ಬಾಬು ಅವರ ಕುಟುಂಬ, ವಿದೇಶದಲ್ಲಿದ್ದೇವೆ ಎಂಬ ಕುಂಟು ನೆಪ ಹೇಳುತ್ತಿದೆ. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ಜೀವ ಬೆದರಿಕೆ‌ ಹಾಕಿರುವ ಹಿನ್ನೆಲೆ ಮನೆ ಮಾಲೀಕ ಪ್ರಸನ್ನ ಎಂಬುವರು, ನಿರ್ದೇಶಕ ರಾಜೇಂದ್ರ ಸಿಂಗ್​​​ ಕುಟುಂಬದ ವಿರುದ್ಧ ನಗರ ಪೊಲೀಸ್​ ಕಮೀಷನರ್​ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

ಕಳೆದ 7ತಿಂಗಳಿಂದ ಮನೆ ಬಾಡಿಗೆ ಕೊಡದೇ ಸತಾಯಿಸುತ್ತಿರುವುದರಿಂದ ಮನೆ ಮಾಲೀಕ ಪ್ರಸನ್ನ, ಬಾಬು ಕುಟುಂಬಸ್ಥರ ಬಳಿ ಬಾಡಿಗೆ ಕೇಳಲು ಹೋದಾಗ ಕೊಲೆ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ನ್ಯಾಯಾಲಯ ಹಾಗೂ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ABOUT THE AUTHOR

...view details