ಬೆಂಗಳೂರು:ಅನರ್ಹ ಶಾಸಕ ಮುನಿರತ್ನ ಅವರನ್ನ ಬಿಬಿಎಂಪಿ ಕಚೇರಿ ಆವರಣದೊಳಗೆ ಬಿಡದೆ ಪೊಲೀಸರು ಗೇಟ್ನಲ್ಲೇ ತಡೆದ ಹಿನ್ನೆಲೆ ಕೆಲ ನಿಮಿಷಗಳ ಕಾಲ ಆವರಣದಲ್ಲೇ ನಿಂತ ಮುನಿರತ್ನ ನಂತರ ತಮ್ಮ ವಾಹನ ಕರೆಸಿಕೊಂಡು ಬೇಸರದಲ್ಲೇ ವಾಪಸಾಗಿದ್ದಾರೆ.
ಅನರ್ಹ ಶಾಸಕ ಮುನಿರತ್ನರನ್ನು ಬಿಬಿಎಂಪಿ ಗೇಟ್ನಲ್ಲೇ ತಡೆದ ಪೊಲೀಸರು..! - Munirathna
ಬಿಬಿಎಂಪಿ ಕಚೇರಿಯೊಳಹೆ ಹೋಗಲು ಮುಂದಾಗಿದ್ದ ಅನರ್ಹ ಶಾಸಕ ಮುನಿರತ್ನ ಅವರನ್ನು ಗೇಟ್ನಲ್ಲೇ ಪೊಲೀಸರು ತಡೆದರು. ಹೀಗಾಗಿ ಅವರು ಬೇಸರದಿಂದಲೇ ಬಿಬಿಎಂಪಿ ಕಚೇರಿಯಿಂದ ಹಿಂದಿರುಗಿದರು.
ಮುನಿರತ್ನ ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕ. ಡಿಸಿಎಂ ಅಶ್ವಥ್ ನಾರಾಯಣ್ ಕಾರಿನಲ್ಲಿ ಬಂದರು. ಡಿಸಿಎಂ ಜೊತೆ ಬಿಬಿಎಂಪಿ ಕಚೇರಿಯೊಳಗೆ ಹೋಗಲು ಮುಂದಾದ ಅವರನ್ನು ಗೇಟ್ನಲ್ಲೇ ಪೊಲೀಸರು ತಡೆಹಿಡಿದರು. ಬಳಿಕ ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ರೂ ಸಹ ಮುನಿರತ್ನ ಅವರನ್ನು ಪೊಲೀಸರು ತಡೆದು, ಡಿಸಿಎಂ ಮಾತಿಗೆ I am sorry ಸರ್ ಎಂದು ಹೇಳಿದರು.
ಹೀಗೆ ಕೆಲ ನಿಮಿಷಗಳ ಕಾಲ ಆವರಣದಲ್ಲೇ ನಿಂತ ಮುನಿರತ್ನ ನಂತರ ತಮ್ಮ ವಾಹನವನ್ನು ಕರೆಸಿಕೊಂಡು ಬೇಸರದಲ್ಲೇ ಹಿಂದಿರುಗಿದರು. ಮುನಿರತ್ನ ತಮ್ಮ ಶಾಸಕ ಸ್ಥಾನದಿಂದ ಅನರ್ಹವಾಗಿರುವ ಹಿನ್ನೆಲೆ ಮೇಯರ್ ಚುನಾವಣೆಯಲ್ಲಿ ವೋಟ್ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಒಂದು ವೇಳೆ ಅನರ್ಹರಾಗಿಲ್ಲದಿದ್ರೆ ಇಂದು ಪೊಲೀಸರೇ ಭದ್ರತೆ ನೀಡಿ ಬಿಬಿಎಂಪಿ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸುತ್ತಿದ್ರು.