ಕರ್ನಾಟಕ

karnataka

ETV Bharat / state

ನಾಳೆ ಮೊಹರಂ ಹಬ್ಬ ಆಚರಣೆ... ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಣ್ಗಾವಲು...ನಗರ ಆಯುಕ್ತರ ಸೂಚನೆ - bngmoharamnews

ನಾಳೆ ಮೊಹರಂ ದಿನ ಆಚರಣೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು ಇರಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಣ್ಗಾವಲು

By

Published : Sep 9, 2019, 5:48 PM IST

ಬೆಂಗಳೂರು:ನಾಳೆ ನಾಡಿನೆಲ್ಲೆಡೆ ಮೊಹರಂ ದಿನ ಆಚರಣೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು ಇರಿಸಲಾಗಿದೆ.

ರಾಜ್ಯಾದ್ಯಂತ ಮೊಹರಂ ಆಚರಣೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಮುಂತಾದ ಎಲ್ಲಾ‌ ಸಾರ್ವಜನಿಕ ಸೇವೆಗೆ ರಜಾ ಕೂಡ ಘೋಷಣೆ ಮಾಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೂಡ ಮುಸ್ಲಿಂ ಭಾಂದವರು ಸಂಭ್ರಮದಿಂದ ಹಬ್ಬವನ್ನ ಆಚರಣೆ ಮಾಡ್ತಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಮುಂಜಾಗೃತ ಕ್ರಮವಾಗಿ ನಗರ ಪೊಲಿಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ವಹಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಣ್ಗಾವಲು

ಹೀಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಟ್ರಾಫಿಕ್ ಆಯುಕ್ತರು, ಏಳು ವಿಭಾಗದ ಡಿಸಿಪಿಗಳು,ಇನ್ಸ್​ಪೆಕ್ಟರ್​ಗಳು, ಕಾನ್ಸ್ಟೇಬಲ್, ‌ಕೆಎಸ್​ಆರ್​ಪಿ ತುಕಡಿ, ಹೊಯ್ಸಳ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಅದರಲ್ಲೂ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್​, ಭಾರತಿನಗರ, ಮೆಜೆಸ್ಟಿಕ್ ಈ ವ್ಯಾಪ್ತಿಯಲ್ಲಿ ಹೆಚ್ಚಿನ ರೀತಿಯಲ್ಲಿ ಪೊಲೀಸರು ನಿಗಾ ವಹಿಸಲಿದ್ದಾರೆಂದು ನಗರ ಆಯುಕ್ತ ತಿಳಿಸಿದರು.

ABOUT THE AUTHOR

...view details