ಬೆಂಗಳೂರು: ನಗರ ಪೊಲೀಸರಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭರ್ಜರಿ ಗಿಫ್ಟ್ ನೀಡಿದ್ದು, ಎಷ್ಟೇ ಒತ್ತಡವಿದ್ದರೂ ಹುಟ್ಟುಹಬ್ಬದ ದಿನದಂದು ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ರಜೆ ನೀಡಲು ಆದೇಶಿದ್ದಾರೆ.
ಬೆಂಗಳೂರು ಪೊಲೀಸರಿಗೆ ಭರ್ಜರಿ ಗಿಫ್ಟ್ ನೀಡಿದ ಭಾಸ್ಕರ್ ರಾವ್ - ಭಾಸ್ಕರ್ ರಾವ್
ನಗರ ಪೊಲೀಸರಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭರ್ಜರಿ ಗಿಫ್ಟ್ ನೀಡಿದ್ದು, ಎಷ್ಟೇ ಒತ್ತಡವಿದ್ದರೂ ಹುಟ್ಟುಹಬ್ಬದ ದಿನದಂದು ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ರಜೆ ನೀಡಲು ಆದೇಶಿದ್ದಾರೆ.
ಹುಟ್ಟುಹಬ್ಬದ ದಿನದಂದು ಸಿಬ್ಬಂದಿ ಕುಟುಂಬದ ಜೊತೆ ಕಾಲ ಕಳೆಯುವ ಮೂಲಕ ಅವರಲ್ಲಿನ ಮಾನಸಿಕ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಹಾಗೂ ಅವರ ಕುಟುಂಬದೊಂದಿಗೆ ಸಂತೋಷವಾಗಿ ಕಾಲ ಕಳೆಯುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಿದ್ದಾರೆ. ಇದರ ಜೊತೆ ಪೊಲೀಸ್ ಸಿಬ್ಬಂದಿಗೆ ಹುಟ್ಟುಹಬ್ಬಕ್ಕೆ ಠಾಣೆಯ ಅಥವಾ ವಿಭಾಗದ ಉಸ್ತುವಾರಿಗಳು ಖುದ್ದು ಗ್ರೀಟಿಂಗ್ ಕಳಿಸುವಂತೆಯೂ ಆದೇಶದಲ್ಲಿ ಹೇಳಲಾಗಿದೆ.
ನಗರದ ಎಲ್ಲಾ ವಿಭಾಗದ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಸೇರಿದಂತೆ ಎಲ್ಲಾ ಹಂತದ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ದಿನದಂದು ರಜೆ ತೆಗೆದುಕೊಳ್ಳಬಹುದಾಗಿದೆ. ಎಎಸ್ಐಗಿಂತ ಮೇಲ್ಪಟ್ಟ ಅಧಿಕಾರಿ ಸಂಬಂಧಿಸಿದ ಅಧಿಕಾರಿಯಿಂದ ರಜೆ ಕೋರಿ ಅನುಮತಿ ಪತ್ರ ಪಡೆಯಬೇಕೆಂದು ಆಯುಕ್ತರು ಸೂಚಿಸಿದ್ದಾರೆ.