ಕರ್ನಾಟಕ

karnataka

ETV Bharat / state

ಸಿಲಿಕಾನ್​​​ ಸಿಟಿಯಲ್ಲಿ ಪೊಲೀಸ್​​​ ಮೇಲೆ ಕಳ್ಳರಿಂದ ಹಲ್ಲೆ - kannada news

ಕಳ್ಳರೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಸೂರ್ಯನಗರದ ಪೋಲಿಸ್ ಠಾಣೆ

By

Published : Apr 20, 2019, 8:31 PM IST

ಬೆಂಗಳೂರು:ಹೊಸೂರು ಹೆದ್ದಾರಿಯ ಚಂದಾಪುರ ಫ್ಲೈ ಓವರ್ ಪಕ್ಕದ ಕೀರ್ತನಾ ಹೋಟಲ್ ಬಳಿ ಕಳ್ಳರನ್ನು ಹಿಡಿಯಲು ಬಂದ ಎಎಸ್​​ಐ ಶಿವಲಿಂಗ ನಾಯಕ್ ಮೇಲೆ ಕಳ್ಳರೇ ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಿದ್ದರೆ.

ನಗರದ ಆನೇಕಲ್ ಸೂರ್ಯನಗರದ ಪೊಲೀಸ್​​ ಠಾಣೆಗೆ ರಾತ್ರಿ 9ರ ಸಮಯದಲ್ಲಿ ನಗರದ ಕೀರ್ತನಾ ಹೋಟೆಲ್ ಬಳಿ ಕಳ್ಳತನವಾಗುತ್ತಿದೆ ಎಂಬ ಮಾಹಿತಿ ಮೇರೆಗೆ ತಕ್ಷಣ ಮೇಲಾಧಿಕಾರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಎಎಸ್​ಐ ಶಿವಲಿಂಗ ನಾಯಕ್ ಧಾವಿಸಿದ್ದಾರೆ. ಸ್ಥಅಲ್ಲಿದ್ದ ನಾಲ್ಕೈದು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದ್ರೆ ಕಳ್ಳರು ನಾಯಕ್​ ಅವರ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಸೂರ್ಯನಗರದ ಪೊಲೀಸ್​​ ಠಾಣೆ

ಸದ್ಯ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡ ಸೂರ್ಯ ಸಿಟಿ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸೆಪಟ್ ಮತ್ತು ಡಿವೈಎಸ್ಪಿ ನಂಜುಂಡೇಗೌಡ, ಸಿಐ ಸೈಮನ್ ವಿಕ್ಟರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details