ಕರ್ನಾಟಕ

karnataka

ETV Bharat / state

ಗ್ಯಾಂಗ್ ರೇಪ್ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಪೊಲೀಸರು - ಆರೋಪಿಗೆ ಕಾಲಿಗೆ ಗುಂಡು

ರಾಜಾಧಾನಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಬಾಂಗ್ಲಾದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Bengaluru Gang rape
ಗ್ಯಾಂಗ್ ರೇಪ್ ಪ್ರಕರಣ

By

Published : Jun 2, 2021, 11:01 AM IST

Updated : Jun 2, 2021, 12:23 PM IST

ಬೆಂಗಳೂರು:ಬಂಧಿಸಿ ಕರೆತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶ ಮೂಲದ ನಿವಾಸಿ ಶೋಬುಜ್ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ. ಈತ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಬಾಂಗ್ಲಾದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಯುವತಿ ಮೇಲಿನ ದೌರ್ಜನ್ಯದ ವೈರಲ್ ವಿಡಿಯೋದಲ್ಲಿ ಆಕೆಯ ಗುಪ್ತಾಂಗ ತುಳಿದು ವಿಕೃತಿ ಮೆರೆದಾತ ಈತನೇ ಆಗಿದ್ದಾನೆ ಎನ್ನಲಾಗಿದೆ.

ಪೂರ್ವ ವಿಭಾಗದ ಡಿಸಿಪಿ ಶರಣಪ್ಪ

ಯುವತಿಯ ಗುಪ್ತಾಂಗ ತುಳಿದು ವಿಕೃತಿ:

ಗ್ಯಾಂಗ್ ರೇಪ್ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಶೋಬುಜ್ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಬಲೆ ಬೀಸಿದ ಪೊಲೀಸರಿಗೆ ಶ್ರೀರಾಂಪುರ ಬಳಿಯ ಪೇಪರ್ ಆಯುವವರ ಶೆಡ್​ನಲ್ಲಿ ಇರುವ ಬಗ್ಗೆ ಮಾಹಿತಿ ದೊರಕಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಠಾಣೆಗೆ ಕರೆತರುವಾಗ ದಾರಿ ಮಧ್ಯೆ ಮೂತ್ರ ವಿಸರ್ಜನೆ ಮಾಡಬೇಕೆಂದು ಎಂದು ಕಥೆ ಕಟ್ಟಿದ್ದಾನೆ. ನಿಲ್ಲಿಸದಿದ್ದರೆ ಪೊಲೀಸ್​ ಕಾರಿನಲ್ಲೇ ಮೂತ್ರ ವಿಸರ್ಜನೆ ಮಾಡುತ್ತೇನೆಂದು ಹಠ ಹಿಡಿದಿದ್ದಾನೆ. ಪೊಲೀಸರು ಕೆಳಗಿಳಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ‌. ಹಿಡಿಯಲು ಹೋದ ಹೆಡ್​ ಕಾನ್ಸ್​ಟೇಬಲ್ ದೇವೆಂದರ್ ನಾಯಕ್ ಹಾಗೂ ಸಬ್​ ಇನ್ಸ್​ಪೆಕ್ಟರ್​​ ಮೇಲೆ ಬಟನ್‌ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ‌. ಈ ವೇಳೆ ಪೊಲೀಸರು ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಆರೋಪಿಯ ಎಡಗಾಲಿಗೆ ಫೈರ್​ ಮಾಡಿ ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:ಅತ್ಯಾಚಾರ ಸಂತ್ರಸ್ತೆ ಮತ್ತು ಬಂಧಿತ ಕೆಲ ಆರೋಪಿಗಳು ಬಾಂಗ್ಲಾದೇಶ ಮೂಲದವರಾಗಿದ್ದು, ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್​ಆರ್​ಐ ಕಾಲೋನಿಯಲ್ಲಿ ವಾಸವಾಗಿದ್ದರು. ಆರೋಪಿಗಳು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗ್ತಿದೆ. ಸಂತ್ರಸ್ತೆ ಮೇಲಿನ ದ್ವೇಷದಿಂದ ಆಕೆಗೆ ಯುವಕರು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದರು.

ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅಸ್ಸೋಂ ಪೊಲೀಸರಿಂದ ವಿಡಿಯೋ ಕುರಿತು ತನಿಖೆ ನಡೆಸಿದಾಗ ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಾಂಗ್ಲಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು‌. ಆ ಬಳಿಕ ಸಂತ್ರಸ್ತೆ ಕುಟುಂಬದ ಸದಸ್ಯರನ್ನ ಪತ್ತೆ ಮಾಡಿದ್ದ ಬಾಂಗ್ಲಾ ಪೊಲೀಸರು, ಕೃತ್ಯವೆಸಗಿದ ಸ್ಥಳ ಆಧರಿಸಿ ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

10 ಆರೋಪಿಗಳ ಬಂಧನ:ಪ್ರಕರಣದಲ್ಲಿ ಭಾಗಿಯಾಗಿ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ ಬಾಂಗ್ಲಾ ಮೂಲದ ರಫ್ಸನ್, ಆತನ ಪತ್ನಿ ತಾನ್ಯಾ ಮತ್ತು ದಾಲೀಮ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಒಟ್ಟು 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮೇ 27ರಂದು 6 ಜನ ಆರೋಪಿಗಳಾದ ರಿದಯ್ ಬಾಬು, ರಕಿಬುಲ್ ಇಸ್ಲಾಂ ಸಾಗರ್, ಮೊಹಮ್ಮದ್ ಬಾಬು ಶೇಕ್, ಅಕಿಲ್, ಇಬ್ಬರು ಮಹಿಳಾ ಆರೋಪಿಗಳಾದ ಕಾಜಲ್, ನಸ್ರತ್ ಎಂಬುವರನ್ನು ಬಂಧಿಸಲಾಗಿತ್ತು‌ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ಓದಿ : ಗ್ಯಾಂಗ್​ ರೇಪ್​ ಪ್ರಕರಣ: ಪೊಲೀಸರಿಂದ ಗುಂಡೇಟು ತಿಂದವ ಬಾಂಗ್ಲಾದಲ್ಲಿ ಟಿಕ್​ಟಾಕ್ ಸ್ಟಾರ್!

Last Updated : Jun 2, 2021, 12:23 PM IST

ABOUT THE AUTHOR

...view details