ಕರ್ನಾಟಕ

karnataka

ETV Bharat / state

ಎಟಿಎಂ ಮಷಿನ್​ಗೆ ಸ್ಕಿಮರ್ ಅಳವಡಿಸಿ ಹಣ ಕಳ್ಳತನ: ಬೆಂಗಳೂರಲ್ಲಿ ವಿದೇಶಿ ಖದೀಮರು ಅಂದರ್​ - ಬೆಂಗಳೂರು ಕ್ರೈಮ್​ ಅಪಡೇಟ್​

ಎಟಿಎಂನ ಉಸ್ತುವಾರಿ ‌ಉಮಾ ಮಹೇಶ್ವರ್ ಎಟಿಎಂ ಕಂಡಿಷನ್ ಹಾಗೂ ಸಿಸಿಟಿವಿ ಪರಿಶೀಲನೆ ಮಾಡಿದಾಗ ಆರೋಪಿಗಳು ಎಟಿಎಂನಲ್ಲಿ ಹಲವಾರು ಹೊತ್ತು ಇದ್ದು, ಸ್ಕಿಮರ್ ಮಷಿನ್‌ ಅಳವಡಿಸಿ ಬೇರೆ ಬೇರೆ ಕಾರ್ಡ್​ಗಳನ್ನ ಹಿಡಿದುಕೊಂಡು ಹಣ ಡ್ರಾ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯನ್ನು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Bangalore
ವಿದೇಶಿ ಆರೋಪಿ

By

Published : Jun 23, 2020, 2:15 PM IST

ಬೆಂಗಳೂರು: ಎಟಿಎಂ ಮಷಿನ್​ಗೆ ಸ್ಕಿಮರ್ ಅಳವಡಿಸಿ ಗ್ರಾಹಕರ ಡೇಟಾವನ್ನು ಕದ್ದು, ನಂತರ ನಕಲಿ ಎಟಿಎಂಗಳನ್ನು ತಯಾರಿ ಮಾಡಿ ಗ್ರಾಹಕರ ಹಣವನ್ನು ಎಗರಿಸುತ್ತಿದ್ದ ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಫಿಲಿಕ್ಸ್ ಕಿಸಿಬೊ, ಕಹಿರೊನೊ ಅಬ್ದುಲ್ಲಾ ಬಂಧಿತರು. ಈ ಆರೋಪಿಗಳು ಗಂಗಾನಗರ ಬಳಿ‌ ಇರುವ ಯೂನಿಯನ್ ಬ್ಯಾಂಕ್​ನ ಎಟಿಎಂನಲ್ಲಿ ಕಾರ್ಡ್‌ಗಳನ್ನ ಹಿಡಿದು‌ ಹಣ ಡ್ರಾ ಮಾಡಿದ್ದರು.

ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳು

ಎಟಿಎಂನ ಉಸ್ತುವಾರಿ ‌ಉಮಾ ಮಹೇಶ್ವರ್ ಅವರು ಎಟಿಎಂ ಕಂಡಿಷನ್ ಹಾಗೂ ಸಿಸಿಟಿವಿ ಪರಿಶೀಲನೆ ಮಾಡಿದಾಗ ಆರೋಪಿಗಳು ಎಟಿಎಂನಲ್ಲಿ ತುಂಬಾ ಹೊತ್ತು ಇದ್ದು, ಸ್ಕಿಮರ್ ಮಷನ್‌ ಅಳವಡಿಸಿ ಬೇರೆ ಬೇರೆ ಕಾರ್ಡ್​ಗಳನ್ನ ಹಿಡಿದುಕೊಂಡು ಹಣ ಡ್ರಾ ಮಾಡ್ತಿದ್ರು. ಹೀಗಾಗಿ ಅನುಮಾ‌ನ ಬಂದು ಆರ್.ಟಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸದ್ಯ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಂಡ ಆರೋಪಿಗಳನ್ನು ಬಂಧಿಸಿ ಅವರಿಂದ 13 ವಿವಿಧ ಬ್ಯಾಂಕಿನ ಎಟಿಎಂ ಕಾರ್ಡ್, 3 ಮೊಬೈಲ್ ಫೋನ್, 1 ಲ್ಯಾಪ್​ಟಾಪ್, ಸ್ಕಿಮರ್ ಮಷಿನ್, ಹಿಡನ್ ಕ್ಯಾಮರಾ ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಯನ್ನು‌ ಮುಂದುವರೆಸಿದ್ದಾರೆ.

ABOUT THE AUTHOR

...view details