ಕರ್ನಾಟಕ

karnataka

ETV Bharat / state

ಕುಡಿದ ನಶೆಯಲ್ಲಿ ಹೆಂಡತಿಯ ಕತ್ತು ಸೀಳಿ ಪರಾರಿಯಾಗಿದ್ದ ಪತಿ ಅರೆಸ್ಟ್​ - ಆರೋಪಿ ಬಂಧಿಸಿದ ​ಹೆಣ್ಣೂರು ಪೊಲೀಸರು

ಕುಡಿದ ಅಮಲಿನಲ್ಲಿ ಪತಿಯೋರ್ವ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆಸಿತ್ತು. ಈ ಕುರಿತಂತೆ ತನಿಖೆ ಕೈಗೊಂಡ ಹೆಣ್ಣೂರು ಪೊಲೀಸರು, ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಆರೋಪಿ ಪತಿ ಅರೆಸ್ಟ್​
Police arrested accused who have murdered his wife at Bangalore

By

Published : Jan 2, 2021, 3:24 PM IST

ಬೆಂಗಳೂರು:ಕುಡಿದ ನಶೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ ಮಾಡಿ ನಂತರ ಆಕೆಯನ್ನು ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ‌.

ಕೊಲೆಯಾದ ಮಹಿಳೆ

ರಾಮ್ ಬಹದ್ದೂರ್ ಬಂಧಿತ ಆರೋಪಿ. ಧೂಪಿದೇವಿ ಕೊಲೆಯಾದ ಮಹಿಳೆಯಾಗಿದ್ದಾರೆ. ದಂಪತಿ ಮೂಲತಃ ನೇಪಾಳದವರಾಗಿದ್ದು,‌ ಎರಡು ವರ್ಷಗಳ ಹಿಂದೆ ನಗರದ ಹೊರಮಾವಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ರಾಮ್ ಬಹದ್ದೂರ್ ಐಸ್ ಕ್ರೀಂ ಕಂಪನಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದ. ದಂಪತಿಗೆ ಇಬ್ಬರು ಗಂಡು-ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬ ಅನ್ಯೋನ್ಯವಾಗಿತ್ತು.

ಓದಿ: ಮೈಸೂರಿನಲ್ಲಿ ಒಂದೇ ಒಂದು ಬ್ರಿಟನ್‌ನ ರೂಪಾಂತರ ವೈರಸ್‌ ಪ್ರಕರಣ ಇಲ್ಲ.. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಈ ನಡುವೆ‌ ಕುಡಿತದ ಚಟ ಬೆಳೆಸಿಕೊಂಡಿದ್ದ ರಾಮ್, ಪ್ರತಿದಿನ ಕುಡಿದು ಮನೆಗೆ ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನಂತೆ‌. ಹೀಗಾಗಿ ಇವರಿಬ್ಬರ ನಡುವೆ ಈ ವಿಚಾರಕ್ಕಾಗಿ ಆಗಾಗ ಜಗಳವಾಗುತ್ತಿತ್ತು‌‌‌. ನಿನ್ನೆ ರಾತ್ರಿ ಕುಡಿದು ಬಂದಿದ್ದ ಗಂಡನನ್ನು ಹೆಂಡತಿ ಪ್ರಶ್ನಿಸಿದ್ದಾಳೆ. ಇದಕ್ಕೆ ಕಿಡಿಕಾರಿ, ಹೆಂಡತಿ ಮೇಲೆ ಮುಗಿಬಿದ್ದಿದ್ದಾನೆ. ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಚಾಕುವಿನಿಂದ ಹೆಂಡತಿ‌ಯ ಕತ್ತು ಸೀಳಿದ್ದಾನೆ. ತೀವ್ರ ರಕ್ತಸ್ರಾವವಾಗಿ ನೆಲಕ್ಕೆ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ‌.‌

ವಿಷಯ ಆಧರಿಸಿ ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ABOUT THE AUTHOR

...view details