ಬೆಂಗಳೂರು:ನಗರದಲ್ಲಿ ಮನೆ ಮುಂದೆ ಇರುವ ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡಿ ನೊಂದಣಿ ಸಂಖ್ಯೆ, ಇಂಜಿನ್ ನಂಬರ್ಗಳನ್ನು ಬದಲಿಸಿ ನಕಲಿ ನಂಬರ್ ಹಾಗೂ ಆರ್ಸಿ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಯ್ಯದ್ ತಬ್ರೇಜ್ ಪಾಷಾ ಬಂಧಿತ ಆರೋಪಿ. ಈತ 2010 ರಿಂದ ನಗರದಲ್ಲಿ ಹಲವಾರು ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡಿ ನಂತರ ವಾಹನಗಳ ಮಾಲೀಕರು ಗುರುತು ಹಿಡಿಯದ ಹಾಗೆ ಬಣ್ಣ ಬಳಿದು ವಾಹನದ ಭಾಗಗಳನ್ನ ಬದಲಾವಣೆ ಮಾಡುತ್ತಿದ್ದ. ಬಳಿಕ ನಕಲಿ ನೋಂದಣಿ ಸಂಖ್ಯೆ ಹಾಕ್ತಿದ್ದ. ಹಾಗೆ ಆ ನಂಬರ್ಗೆ ಹೋಲುವ ಹಾಗೆ ನಕಲಿ ಆರ್.ಸಿ ಪುಸ್ತಕ ಸೃಷ್ಟಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದ.