ಬೆಂಗಳೂರು :ಪಾದರಾಯನಪುರದಲ್ಲಿ ಕೊರೊನಾ ಪರೀಕ್ಷೆಯ ವೇಳೆ ಸೋಂಕಿತರು ಪತ್ತೆಯಾದ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ, ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
ಪಾದರಾಯನಪುರದಲ್ಲಿ ಮತ್ತೆ ಪಾಸಿಟಿವ್ ಕೇಸ್; ಸ್ಥಳದಲ್ಲಿ ಖಾಕಿ ಕಣ್ಗಾವಲು - ಪಾದರಾಯನಪುರದಲ್ಲಿ ಪೊಲೀಸ್ ಕಣ್ಗಾವಲು
ಪಾದರಾಯನಪುರದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ಥಳದಲ್ಲಿ ಖಾಕಿ ಕಣ್ಗಾವಲು ಇಡಲಾಗಿದೆ.
ಪೊಲೀಸ್ ಕಣ್ಗಾವಲು
ಪಾದರಾಯನಪುರದ ಕಂಟೇನ್ಮೆಂಟ್ ಝೋನ್ ಪಕ್ಕದ ರಸ್ತೆಗಳು ಬಂದ್ ಆಗಿದ್ದು, ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇಷ್ಟು ದಿನ ತೆರೆದಿದ್ದ ರಸ್ತೆಗಳನ್ನು ಬಂದ್ ಮಾಡಿದ ಅಧಿಕಾರಿಗಳು ವಿಶೇಷ ಬಂದೋಬಸ್ತ್ ಮಾಡಿದ್ದಾರೆ.
ಸ್ಥಳದಲ್ಲಿ ಪಶ್ಚಿಮ ವಿಭಾಗ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಮೊಕ್ಕಾಂ ಹೂಡಿದ್ದಾರೆ.