ಹೈದರಾಬಾದ್: ಕೋವಿಡ್ ವಿರುದ್ಧ ಸರ್ಕಾರ ಸೇರಿದಂತೆ ಸಂಘ-ಸಂಸ್ಥೆಗಳು ಸಹ ಜಾಗೃತಿ ಅಭಿಯಾನ ಆರಂಭಿಸಿದ್ದು, ಇದೀಗ ಪ್ಲಾಸ್ಮಾ ದಾನ ಮಾಡುವಂತೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯ ಪೊಲೀಸರು ಜಂಟಿಯಾಗಿ ಹಾಡೊಂದನ್ನು ರಚಿಸಿದ್ದಾರೆ.
ಪ್ಲಾಸ್ಮಾ ದಾನ ಮಾಡುವಂತೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯಿಂದ ಹಾಡು ಬಿಡುಗಡೆ - bangalore news
ಪ್ಲಾಸ್ಮಾ ದಾನ ಮಾಡುವಂತೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯ ಪೊಲೀಸರು ಜಂಟಿಯಾಗಿ ಹಾಡೊಂದನ್ನು ರಚಿಸಿದ್ದು,ಪ್ಲಾಸ್ಮಾ ದಾನ ಮಾಡುವಂತೆ ಪ್ರೋತ್ಸಾಹ ನೀಡುವ ಹಾಡು ಇದಾಗಿದ್ದು, ಶ್ರೀನಿಧಿ ತಿರುಮಲ ಸಂಗೀತ ನಿರ್ದೇಶಿಸಿ ಹಾಡಿಗೆ ಧ್ವನಿಗೂಡಿಸಿದ್ದಾರೆ.
ಪ್ಲಾಸ್ಮಾ ನೀಡುವಂತೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯಿಂದ ಹಾಡು ಬಿಡುಗಡೆ
ಈ ಮೂಲಕ ಜನತೆಗೆ ಪ್ಲಾಸ್ಮಾ ದಾನ ಮಾಡುವಂತೆ ಪ್ರೇರಿಪಿಸಿದ್ದು, ಕೊರೊನಾ ಕುರಿತು ಜಾಗೃತಿಗೆ ಮುಂದಾಗಿದ್ದಾರೆ. ‘ನಾ ನೀಡುವೆ ಪ್ಲಾಸ್ಮಾ, ನಾ ಆಗುವೆ ಸಂಜೀವಿನಿ’ ಎಂಬ ಸಾಲು ಹೊಂದಿರುವ ಹಾಡನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ.
ಹಾಡಿಗೆ ಪ್ರಖ್ಯಾತ ದಂತ ವೈದ್ಯರಾದ ಪರಪ್ಪಾ ಸಜ್ಜನ್ ಸಾಹಿತ್ಯ ಬರೆದಿದ್ದು, ಶ್ರೀನಿಧಿ ತಿರುಮಲ ಸಂಗೀತ ನಿರ್ದೇಶಿಸಿ ಹಾಡಿಗೆ ಧ್ವನಿಗೂಡಿಸಿದ್ದಾರೆ. ಜತೆ ಬಾಹುಬಲಿ ಖ್ಯಾತಿಯ ಎಂ.ಎಂ ಕೀರವಾಣಿ ಸಹ ಹಾಡಿಗೆ ಧ್ವನಿಯಾಗಿದ್ದಾರೆ.
Last Updated : Oct 20, 2020, 7:41 PM IST