ಬೆಂಗಳೂರು:ಫೋನ್ ಟ್ಯಾಪಿಂಗ್ ಆರೋಪ ಸುಳಿಯಲ್ಲಿ ಸಿಲುಕಿರುವ 40 ಇನ್ಸ್ಪೆಕ್ಟರ್ಗಳು ಇದೀಗ ಸಿಬಿಐ ಎದುರು ಕಾಲಾವಕಾಶ ಕೇಳಿದ್ದಾರೆ. ಮಾಜಿ ಕಮಿಷನರ್ ಒಬ್ಬರ ಸೂಚನೆಯಂತೆ ಕೊಲೆ ಕೇಸ್ನಲ್ಲಿ ಗಣ್ಯರ ಮೊಬೈಲ್, ಟ್ಯಾಪಿಂಗ್ ಮಾಡಿರುವುದು ಸಿಬಿಐ ತನಿಖೆಯಲ್ಲಿ ಬಯಲಾಗಿತ್ತು.
ಫೋನ್ ಟ್ಯಾಪಿಂಗ್: ಸಿಬಿಐ ಎದುರು ಸಮಯಾವಕಾಶ ಕೇಳಿದ 40 ಇನ್ಸ್ಪೆಕ್ಟರ್ಗಳು - phone tapping case updates
ರಾಜಕೀಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಭಾರಿ ಸದ್ದು ಮಾಡಿದ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಐಎಎಸ್ ಅಧಿಕಾರಿಗಳು, ಸ್ವಾಮೀಜಿ ಹಾಗೂ ರಾಜಕಾರಣಿಗಳ ಫೋನ್ ಟ್ಯಾಪ್ ಮಾಡಿದ 40ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು. ಹಾಗೆ ಸದ್ಯ ವಿಚಾರಣೆಗೆ ಹಾಜರಾದ 40 ಇನ್ಸ್ಪೆಕ್ಟರ್ಗಳನ್ನು ಐದೈದು ಬಾರಿ ಸಿಬಿಐ ಸುಮಾರು 22 ಪ್ರಶ್ನೆಗಳ ಪಟ್ಟಿ ಮಾಡಿಕೊಂಡು ಡ್ರಿಲ್ ಮಾಡಿ ವಿಚಾರಣೆ ನಡೆಸಿದಾಗ ಸರಿಯಾದ ದಾಖಲೆ ಒದಗಿಸಲು ಸಮಯಾವಕಾಶ ಬೇಕೆಂದು ಇನ್ಸ್ಪೆಕ್ಟರ್ಗಳು ಸಿಬಿಐ ಎದುರು ಮನವಿ ಮಾಡಿದ್ದಾರೆ.
ಹೀಗಾಗಿ ಪ್ರಕರಣದಲ್ಲಿ ಕೇಳಿ ಬಂದ 40 ಇನ್ಸ್ಪೆಕ್ಟರ್ಗಳಿಗೆ ಸಿಬಿಐ ಸಮಯಾವಕಾಶ ನೀಡಿದ್ದು ಸರಿಯಾದ ದಾಖಲೆ ನೀಡುವಂತೆ ಸೂಚಿಸಿದೆ. ಇನ್ಸ್ಪೆಕ್ಟರ್ಗಳು ಸರಿಯಾದ ದಾಖಲೆಗಳನ್ನು ಒದಗಿಸದರೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಯೊಬ್ಬರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಅನ್ನೋ ಮಾತು ಕೇಳಿ ಬಂದಿದೆ.