ಬೆಂಗಳೂರು :ಸ್ನೇಹಿತನ ಮನೆಗೆ ಹೋಗಿ ಬರುವಾಗ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಪರಾರಿಯಾಗಿರುವ ಘಟನೆ ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನರಸಿಂಹ ಸ್ವಾಮಿಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.
ವಿದ್ಯಾರಣ್ಯಪುರ ನಿವಾಸಿ ವಿಶ್ವನಾಥ ಕೊಲೆಯಾದವ. ಈ ಹಿಂದೆ ಇದೇ ನರಸಿಂಹಸ್ವಾಮಿ ಲೇಔಟ್ನಲ್ಲಿ ಈತ ವಾಸವಾಗಿದ್ದ. ಇತ್ತೀಚೆಗೆ ವಿದ್ಯಾರಣ್ಯಪುರಕ್ಕೆ ತೆರಳಿದ್ದ. ಇಂದು ಘಟನೆ ನಡೆದ ಜಾಗದಲ್ಲೇ ಪರಿಚಯಸ್ಥನಾಗಿದ್ದ ರವಿ ಎಂಬಾತನೊಂದಿಗೆ ಮಾತನಾಡಲು ಬಂದಿದ್ದನಂತೆ. ಈ ಹಿಂದೆ ಇದೇ ಏರಿಯಾದಲ್ಲಿದ್ದ ವೇಳೆ ರವಿ ಕುಟುಂಬದೊಂದಿಗೆ ಒಂದಷ್ಟು ಕಿರಿಕ್ ನಡೆದಿತ್ತು ಎನ್ನಲಾಗಿದೆ.
ಈ ಹಿಂದೊಮ್ಮೆ ವಿವಾಹೇತರ ಸಂಬಂಧದ ವಿಚಾರಗಳ ಬಗ್ಗೆ ಕೂಡ ಗಲಾಟೆ ನಡೆದಿತ್ತು. ಹೀಗಾಗಿ, ಇದೇ ವಿಚಾರವಾಗಿ ವಿಶ್ವನಾಥ್, ರವಿಯ ಮನೆಗೆ ಬಂದಿರುವ ಸಾಧ್ಯತೆಯಿದೆ. ಸ್ಥಳೀಯರು ಹೇಳುವ ಪ್ರಕಾರ, ಇಂದು ಬೆಳಗಿನ ಜಾವ ಕೂಡ ಸ್ವಲ್ಪ ಮಟ್ಟಿಗೆ ಅವರ ನಡುವೆ ಕಿರಿಕ್ ನಡೆದಿತ್ತಂತೆ.
ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ವ್ಯಕ್ತಿ ಕೊಲೆ ನಂತರ ವಿಶ್ವನಾಥ್, ರವಿಯ ಮನೆಯಿಂದ ಹೊರ ಬಂದು ಜೇಬಿನಲ್ಲಿದ್ದ ಗುಟ್ಕಾ ಪ್ಯಾಕೆಟ್ ಹರಿದು ಬಾಯಿಗಿಡುವಷ್ಟರಲ್ಲಿ ಬೈಕ್ನಲ್ಲಿ ಬಂದ ಹಂತಕ ವಾಹನ ರನ್ನಿಂಗ್ನಲ್ಲಿದ್ದಾಗಲೇ ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಕ್ಷಣಾರ್ಧದಲ್ಲೇ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಕುತ್ತಿಗೆಗೆ ಕೊಯ್ದಿದ್ದರಿಂದ ಮಿಸುಕಾಡಲೂ ಸಾಧ್ಯವಾಗದೆ ವಿಶ್ವ ನೆಲಕ್ಕುರುಳಿದ್ದ. ಸ್ಥಳದಲ್ಲಿನ ಸಿಸಿಟಿವಿ ಪ್ರಕಾರ, ಒಬ್ಬನೇ ಈ ಹತ್ಯೆ ಮಾಡಿದ್ದಾನೆ. ಆ ವಿಡಿಯೋ ಆಧರಿಸಿ ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನೊಂದೆಡೆ ವಿಶ್ವನಾಥ್ ಮನೆಗೆ ಬಂದ ವೇಳೆ ಇದ್ದ ರವಿ ಕೊಲೆಯಾದ ಬಳಿಕ ಎಸ್ಕೇಪ್ ಆಗಿದ್ದಾನೆ. ಹೀಗಾಗಿ, ಅವರ ಮನೆಯವರನ್ನ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಂತರ್ಜಾತಿ ವಿವಾಹಕ್ಕೆ ವಿರೋಧ: ಪ್ರೇಮಿಗಳ ದಿನಕ್ಕೂ ಮುನ್ನವೇ ನೇಣಿಗೆ ಶರಣಾದ ಜೋಡಿ