ಕರ್ನಾಟಕ

karnataka

ETV Bharat / state

ಉನ್ನತ ಸ್ಥಾನದಲ್ಲಿರುವವರು ಇತಿಮಿತಿಯಲ್ಲಿ ಮಾತನಾಡಬೇಕು ಎಂದ ಹೈಕೋರ್ಟ್ - ಕನ್ನಡ ಭಾಷಾ ಕಲಿಕಾ ಕಾಯಿದೆ

ಉನ್ನತ ಹುದ್ದೆಗಳನ್ನು ಅಲಕಂರಿಸಿರುವವರು ಅತ್ಯಂತ ಇತಿಮಿತಿಯಲ್ಲಿ ಮಾತನಾಡಬೇಕು ಎಂದು ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಕುರಿತ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

people-who-are-in-high-positions-should-speak-carefully-high-court
ಉನ್ನತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದ ಹೈಕೋರ್ಟ್

By ETV Bharat Karnataka Team

Published : Nov 2, 2023, 11:05 PM IST

Updated : Nov 3, 2023, 7:37 AM IST

ಬೆಂಗಳೂರು: ಪ್ರಾದೇಶಿಕ ಭಾಷೆ ಮತ್ತು ರಾಜ್ಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವವರು ಅಸಮರ್ಥರು ಎಂದು ಭಾವಿಸಬಾರದು. ಪ್ರಾದೇಶಿ ಭಾಷೆಯಲ್ಲಿ ಶಿಕ್ಷಣ ಪಡೆದವರೂ ಯಶಸ್ವಿಯಾಗಬಹುದು. ಆದರೆ, ಈ ಸಮಸ್ಯೆಗಳನ್ನು ಕಾನೂನು ಅಂಶಗಳಲ್ಲಿ ಪರಿಗಣಿಸಬೇಕು ಎಂದಿರುವ ಹೈಕೋರ್ಟ್, ಈ ವಿಚಾರದಲ್ಲಿ ಉನ್ನತ ಸ್ಥಾನದಲ್ಲಿರುವವರು ಇತಿಮಿತಿಯಲ್ಲಿ ಮಾತನಾಡಬೇಕು ಎಂದು ತಿಳಿಸಿದೆ.

ಸಿಬಿಎಸ್ಸಿ ಮತ್ತು ಐಸಿಎಸ್ಸಿ ಮಂಡಳಿಗೆ ಪಠ್ಯ ಕ್ರಮಕ್ಕೆ ಕನ್ನಡ ಭಾಷೆ ಬೋಧನೆ ಕಡ್ಡಾಯ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಎಂಟು ಮಂದಿ ವಿದ್ಯಾರ್ಥಿಗಳ ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು, ನಾನೂ ಸಹಾ ಪ್ರಾದೇಶಿ ಭಾಷೆಯಲ್ಲಿ ಅಧ್ಯಯನ ಮಾಡಿದ್ದೇನೆ. ನನ್ನ ಸಾಧನೆಗೆ ಎಂದಿಗೂ ಭಾಷೆ ಅಡ್ಡಿಯಾಗಲಿಲ್ಲ. ಆದರೂ ನ್ಯಾಯಾಲಯ ಕಾನೂನಿನ ಅಂಶಗಳಡಿಯಲ್ಲಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು. ಜೊತೆಗೆ, ಈ ರೀತಿಯ ವಿಚಾರಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಇತಿಮಿತಿಯಲ್ಲಿ ಮಾತನಾಡಬೇಕು ಎಂದು ಹೇಳಿದರು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ಅರ್ಜಿದಾರರಾಗಿರುವ ಪೋಷಕರು ತಮ್ಮ ಮಕ್ಕಳು ಯಾರು ಹಾಗೂ ಯಾವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬ ಆಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ಜೊತೆಗೆ, ಮಕ್ಕಳು ಶಾಲೆಗಳಲ್ಲಿ ಕಿರುಕುಳ ಅನುಭವಿಸುವ ಕೆಲವು ನಿರ್ದೇಶನಗಳಿವೆ. ಅಪ್ರಾಪ್ತ ಮಕ್ಕಳು ನ್ಯಾಯಾಲಯದಲ್ಲಿ ಭಾಗಿಯಾಗುವುದು ಬಯಸುವುದಿಲ್ಲ. ಹೀಗಾಗಿ ಗೌಪತ್ಯೆ ಕಾಪಾಡಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇತರೆ ರಾಜ್ಯಗಳಲ್ಲಿಯೂ ಇದೇ ರೀತಿಯ ಅರ್ಜಿಗಳು ವಿಚಾರಣೆಗೆ ಬಂದಿವೆ. ಅಂತಹ ಪ್ರಕರಣಗಳಲ್ಲಿ ಮೊದಲು ಪ್ರಶ್ನಿಸಿದ್ದು ಪೋಷಕರಲ್ಲ. ಹೀಗಾಗಿ ಮಕ್ಕಳಿಗೆ ತೊಂದರೆಯಾಗಲಿದೆ ಎಂಬುದು ಪೋಷಕರ ಅಸಮಂಜಸವಾದ ಆತಂಕವಾಗಿದೆ ಎಂದು ತಿಳಿಸಿತು. ಜೊತೆಗೆ, ಇತರೆ ಅರ್ಜಿದಾರರ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ ಏನು ?ಕರ್ನಾಟಕ ಭಾಷಾ ಕಲಿಕೆ ಕಾಯಿದೆ 2015ರ ಸೆಕ್ಷನ್ 3ರ ನಿಯಮ 3, ಕರ್ನಾಟಕ ಭಾಷಾ ಕಲಿಕೆ ನಿಯಮಗಳು 2017ರ ನಿಯಮ 6(2), ಕರ್ನಾಟಕ ಶಿಕ್ಷಣ ಸಂಸ್ಥೆಗಳ(ನಿರಾಕ್ಷೇಪಣಾ ಪ್ರಮಾಣ ಪತ್ರದ ವಿತರಣೆ) ನಿಯಂತ್ರಣಾ ನಿಯಮ 6(3) ಪ್ರಕಾರ ಸಿಬಿಎಸ್‌ಸಿ ಮತ್ತು ಐಸಿಎಸ್ಸಿ ಪಠ್ಯ ಕ್ರಮ ಅಳವಡಿಸಿರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಎಂಬುದಿದೆ. ಇದರಿಂದ ಅರ್ಜಿದಾರರ ಮಕ್ಕಳಿಗೆ ಅನಾನುಕೂಲವಾಗಲಿದೆ. ಅಲ್ಲದೆ, ಈ ನಿಯಮಗಳನ್ನು ಜಾರಿ ಮಾಡದ ಶಾಲೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಜೊತೆಗೆ, ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯುವುದಕ್ಕೆ ತೊಂದರೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಕೋರಿದ್ದರು.

ಇದನ್ನೂ ಓದಿ: 2026ರ ಜನಸಂಖ್ಯೆಗೆ ಅನುಗುಣವಾಗಿ ಶೇ.5ರಷ್ಟು ಶೌಚಾಲಯ: ಹೈಕೋರ್ಟ್​ಗೆ ಸರ್ಕಾರ ಮಾಹಿತಿ

Last Updated : Nov 3, 2023, 7:37 AM IST

ABOUT THE AUTHOR

...view details