ಕರ್ನಾಟಕ

karnataka

ETV Bharat / state

ಮದ್ಯ ಸಿಗದ ಭೀತಿ : ಬ್ಯಾಗ್, ಚೀಲಗಳಲ್ಲಿ ಎಣ್ಣೆ ತುಂಬಿಸಿ ಕೊಂಡೊಯ್ದ ಗುಂಡುಪ್ರಿಯರು!

ಸಂಜೆ 6 ಆಗುತ್ತಿದ್ದಂತೆ ಮದ್ಯದಂಗಡಿಗಳಿಗೆ ವೈನ್ ಸ್ಟೋರ್, ಎಂಎಸ್ಐಎಲ್ ಅಂಗಡಿಗಳಿಗೆ ಧಾವಿಸಿ ಬಂದ ಯುವಕರು, ಹಿರಿಯರು ಕೇಸುಗಟ್ಟಲೆ ಬಿಯರ್, ಮದ್ಯದ ಪೌಚುಗಳನ್ನು ಕೊಂಡೊಯ್ದು ಗುಂಡು ಸಿಕ್ಕ ಖುಷಿಯಲ್ಲಿ ತೇಲಾಡಿದರು

people rushed in front of alcohol stores
ಮದ್ಯ ಸಿಗದ ಭೀತಿ

By

Published : Apr 27, 2021, 2:23 AM IST

ಚಾಮರಾಜನಗರ: ಕೊರೊನಾ ಕರ್ಫ್ಯೂ ಘೋಷಿಸಿರುವುದರಿಂದ ಮದ್ಯಪ್ರಿಯರು ಎಣ್ಣೆ ಅಂಗಡಿ ಮುಂದೆ ಸಾಲಗಟ್ಟಿ ನಿಂತು ಬ್ಯಾಗು, ಚೀಲಗಳಲ್ಲಿ ಮದ್ಯ ಬಾಟಲಿಗಳನ್ನು ಕೊಂಡೊಯ್ದ ಘಟನೆ ನಗರದಲ್ಲಿ ನಡೆಯಿತು.

ಸಂಜೆ 6 ಆಗುತ್ತಿದ್ದಂತೆ ಮದ್ಯದಂಗಡಿಗಳಿಗೆ ವೈನ್ ಸ್ಟೋರ್, ಎಂಎಸ್ಐಎಲ್ ಅಂಗಡಿಗಳಿಗೆ ಧಾವಿಸಿ ಬಂದ ಯುವಕರು, ಹಿರಿಯರು ಕೇಸುಗಟ್ಟಲೆ ಬಿಯರ್, ಮದ್ಯದ ಪೌಚುಗಳನ್ನು ಕೊಂಡೊಯ್ದು ಗುಂಡು ಸಿಕ್ಕ ಖುಷಿಯಲ್ಲಿ ತೇಲಾಡಿದರು.

ಶನಿವಾರ, ಭಾನುವಾರ ಮಾತ್ರ ಕುಡಿಯುತ್ತೇವೆ ಎಂದು ಕೆಲ ಯುವಕರು ಪ್ರತಿಕ್ರಿಯಿಸಿದರೇ ಮತ್ತೂ ಕೆಲವರು ಪ್ರತಿದಿನ ಮದ್ಯ ಸೇವಿಸುವ ಅಭ್ಯಾಸವಿದ್ದು ಕಾಳಸಂತೆಯಲ್ಲಿ ಅಷ್ಟು ದುಡ್ಡು ಕೊಟ್ಟು ಕೊಳ್ಳುಬ ಬದಲು ಹಣವಿದ್ದಷ್ಟು ಮೊದಲೇ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.

ಬ್ಯಾಗ್, ಚೀಲಗಳಲ್ಲಿ ಎಣ್ಣೆ ತುಂಬಿಸಿ ಕೊಂಡೊಯ್ದ ಗುಂಡುಪ್ರಿಯರು!

ಮೊದಲ ಲಾಕ್ಡೌನ್ ನಲ್ಲಿ ಎಣ್ಣೆ ಸಿಗದೇ ಒದ್ದಾಡಿದ ಪರಿಸ್ಥಿತಿ ಅನುಭವಿಸಿದ್ದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನಸಂದಣಿ ಮದ್ಯದಂಗಡಿಗಳ ಮುಂದೆ ಏರ್ಪಟ್ಟು ಭರ್ಜರಿ ವ್ಯಾಪಾರವೇ ಆಗಿದೆ.

ABOUT THE AUTHOR

...view details