ಕರ್ನಾಟಕ

karnataka

By

Published : May 3, 2021, 3:51 PM IST

ETV Bharat / state

ಮಲ್ಲೇಶ್ವರಂನಲ್ಲಿ ಎಂದಿನಂತೆ ಜನರ ಓಡಾಟ: ಬ್ಯಾರಿಕೇಡ್ ಹಾಕಿದ್ದರೂ ಪರಿಶೀಲನೆ ನಡೆಸದ ಪೊಲೀಸರು

ದಿನಗಳೆದಂತೆ ದೇಶದಲ್ಲಿ ಕೊರೊನಾ ತನ್ನ ವ್ಯಾಪಕತೆ ಪ್ರದರ್ಶಿಸುತ್ತಿದೆ.ಈ ನಡುವೆ ಬೆಂಗಳೂರಿನಲ್ಲಿ ಜನ ಸರ್ಕಾರದ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿ ರಸ್ತೆಗಿಳಿದಿದ್ದಾರೆ.

people-breaks-corona-rules-in-bengalore
ಮಲ್ಲೇಶ್ವರಂನಲ್ಲಿ ಎಂದಿನಂತೆ ಜನರ ಓಡಾಟ

ಬೆಂಗಳೂರು: ರಾಜಧಾನಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಮಲ್ಲೇಶ್ವರಂನಲ್ಲಿ ಎಂದಿನಂತೆ ಜನರು ರಸ್ತೆಯಲ್ಲಿ ಓಡಾಡುತ್ತಿದ್ದು, ಕೊರೊನಾ ವೈರಸ್​ನ್ನು ಲೆಕ್ಕಿಸದೇ ಬೇಕಾಬಿಟ್ಟಿ ತಿರುಗಾಡುತ್ತಿರುವುದು ಕಂಡು ಬಂದಿದೆ.

ರಾಜ್ಯದಲ್ಲಿ ದಿನಗಳೆದಂತೆ ಕೊರೊನಾ ವೈರಸ್​ ಹೆಚ್ಚಾಗುತ್ತಿರುವುದರಿಂದ ಪರಿಹಾರದ ಕ್ರಮವಾಗಿ ಸರ್ಕಾರ ಈಗ ಕರ್ಫ್ಯೂ ಮೊರೆ ಹೋಗಿದೆ. ಈ ನಡುವೆ ಜನ ಹೂವು, ಹಣ್ಣು, ತರಕಾರಿ‌ಗಳನ್ನು ಕೊಂಡುಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಧಾವಿಸಿದ್ದಾರೆ.

ಮಲ್ಲೇಶ್ವರಂನಲ್ಲಿ ಎಂದಿನಂತೆ ಜನರ ಓಡಾಟ

ಹನ್ನೆರಡು ಗಂಟೆಯವರೆಗೆ ದಿನಸಿ ಅಂಗಡಿ ತೆರೆದಿರುವ ಕಾರಣ, ಪ್ರತಿ ನಿತ್ಯದಂತೆ ರೋಡ್​ನಲ್ಲಿ ವಾಹನಗಳು ಸಂಚರಿಸುತ್ತಿವೆ. ಡೆಡ್​ಲೈನ್​​ ನಂತರ ಬ್ಯಾರಿಕೇಡ್ ಹಾಕಿದ್ದರೂ ಪೊಲೀಸರು ಯಾವುದೇ ಪರಿಶೀಲನೆಯನ್ನು ನಡೆಸುತ್ತಿಲ್ಲದಿರುವುದು ಕಂಡು ಬರುತ್ತಿದೆ.

ಓದಿ:ಚಾಮರಾಜನಗರ ಘಟನೆ ಕುರಿತು ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಬಿಎಸ್​ವೈ ಟ್ವೀಟ್​

ABOUT THE AUTHOR

...view details