ಕರ್ನಾಟಕ

karnataka

ETV Bharat / state

ಎಸಿಬಿ ರದ್ದು: ಲೋಕಾಯುಕ್ತದಲ್ಲಿ ಬಾಕಿಯಿರುವ ದೂರುಗಳೆಷ್ಟು? - ಎಸಿಬಿ ಸಂಸ್ಥೆ ರದ್ದುಗೊಳಿಸಿ ಹೈಕೋರ್ಟ್​ ಆದೇಶ

ಲೋಕಾಯುಕ್ತದಲ್ಲಿ 8,036 ಪ್ರಕರಣಗಳು ಬಾಕಿಯಿದ್ದು, ಇದರಲ್ಲಿ‌‌ 2,430 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಗಂಭೀರವಲ್ಲದ 13 ಸಾವಿರ ಪ್ರಕರಣಗಳು ದಾಖಲಾಗಿವೆ.

ಲೋಕಾಯುಕ್ತ
ಲೋಕಾಯುಕ್ತ

By

Published : Aug 12, 2022, 4:54 PM IST

ಬೆಂಗಳೂರು:ಎಸಿಬಿ ಸಂಸ್ಥೆಯನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿ ಹೈಕೋರ್ಟ್‌ ಆದೇಶಿಸಿರುವುದು ರಾಜ್ಯದಲ್ಲಿ ಸದ್ಯ ಬಹುಚರ್ಚಿತ ವಿಷಯ. 2016 ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಎಸಿಬಿ ಸಂಸ್ಥೆ ರಚನೆಯಾಗಿತ್ತು. ‌ಈಗ ಕೋರ್ಟ್ ಕೊಟ್ಟಿರುವ ತೀರ್ಪು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ. ಇಷ್ಟು ದಿನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದ ಲೋಕಾಯುಕ್ತದಲ್ಲಿ ಬಾಕಿಯಿರುವ ಪ್ರಕರಣಗಳು ಸಾಕಷ್ಟಿವೆ.

ಒಟ್ಟು 8,036 ಪ್ರಕರಣಗಳು ಲೋಕಾಯುಕ್ತದಲ್ಲಿ ಬಾಕಿಯಿವೆ. ಇದರಲ್ಲಿ‌‌ 2,430 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಗಂಭೀರವಲ್ಲದ 13 ಸಾವಿರ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಈ ಪೈಕಿ 12 ಸಾವಿರ ಪ್ರಕರಣಗಳು ಇತ್ಯರ್ಥವಾಗಿವೆ. 2017 ರ ಜ. 28ರಿಂದ ಇಲ್ಲಿಯವರೆಗೂ ಅಂದರೆ ಐದು ವರ್ಷದಲ್ಲಿ 20,199 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಎಸಿಬಿ ರಚನೆ ರದ್ದುಪಡಿಸಿ ಹೈಕೋರ್ಟ್ ಆದೇಶ

ಇದರಲ್ಲಿ 2,122 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 304 ಸ್ವಯಂಪ್ರೇರಿತ ದೂರನ್ನು ಲೋಕಾಯುಕ್ತ ದಾಖಲಿಸಿಕೊಂಡಿದೆ. ಈ ಎಲ್ಲಾ ಪ್ರಕರಣಗಳ ಜೊತೆ ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಲೋಕಾಯುಕ್ತದಲ್ಲಿ ಪ್ರಕರಣಗಳ ಸಂಖ್ಯೆಯೂ ಸಹ ಹೆಚ್ಚಾಗಲಿದೆ.

ABOUT THE AUTHOR

...view details