ಬೆಂಗಳೂರು: ಬೆಳ್ಳಂಬೆಳ್ಳಿಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿ, ಬಲಿಜ ಸಮಾಜಕ್ಕೆ ಬೆಂಬಲ ನೀಡಬೇಕೆಂದು ಸಿಎಂಗೆ ಮನವಿ ಮಾಡಿದರು.
ಬಲಿಜ ಸಮಾಜಕ್ಕೆ ಬೆಂಬಲ ನೀಡುವಂತೆ ಸಿಎಂಗೆ ಸಂಸದ ಮೋಹನ್ ಮನವಿ
ಬಲಿಜ ಸಮಾಜದವರಿಗೆ ರಿಸರ್ವೇಶನ್ ನೀಡುವ ಸಂಸದ ಪಿ.ಸಿ.ಮೋಹನ್, ಸಿಎಂ ಬಿಎಸ್ವೈರನ್ನು ಭೇಟಿ ಮಾಡಿದ್ದಾರೆ.
ಪಿ.ಸಿ.ಮೋಹನ್ ಮಾತನಾಡಿ, ಬಲಿಜ ಸಮಾಜದ ಬಗ್ಗೆ ಯಡಿಯೂರಪ್ಪನವರ ಜೊತೆ ಮಾತನಾಡಲು ಬಂದಿದ್ದೇವೆ. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಲಿಜ ಸಮಾಜವನ್ನ 3ಎ ಇಂದ 2ಎಗೆ ಶಿಕ್ಷಣಕ್ಕಾಗಿ ಸೇರಿಸಿದ್ರು. ಆದರೆ ಈಗ ಬಲಿಜ ಸಮಾಜದವರಿಗೆ ಉದ್ಯೋಗಕ್ಕೂ ರಿಸರ್ವೇಶನ್ ನೀಡಬೇಕು. ರಾಜ್ಯದಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ಬಲಿಜ ಸಮಾಜದವರು ಇದ್ದು, ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರಿಸರ್ವೇಶನ್ ನೀಡುವಂತೆ ಮನವಿ ಮಾಡಿದ್ದೇವೆ ಎಂದರು. ಇನ್ನು ಇವರಿಗೆ ಅನರ್ಹ ಶಾಸಕ ಡಾ. ಕೆ.ಸುಧಾಕರ್ ಹಾಗೂ ಸಂಸದ ಬಚ್ಚೇಗೌಡ ಸಾಥ್ ನೀಡಿದ್ರು.
ಚುನಾವಣೆ ವೇಳೆ ಆಸ್ತಿ ಮುಚ್ಚಿಟ್ಟಿರುವ ಆರೋಪ ಸಂಬಂಧ ಮಾತಾನಾಡಿ, ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡುತಿದ್ದಾರೆ ಗೊತ್ತಿಲ್ಲ. ನಾನು ಸರಿಯಾಗಿ ಎಲ್ಲಾ ಡಾಕ್ಯುಮೆಂಟ್ ನೀಡಿದ್ದೇನೆ. ಬೇಕಿದ್ದರೆ ಅದನ್ನೆಲ್ಲ ನೀಡುತ್ತೇನೆ ಎಂದರು.