ಕರ್ನಾಟಕ

karnataka

ವಿರೇನ್​ ಖನ್ನಾ ಮನೆ ಮೇಲೆ ದಾಳಿ: ಗಾಂಜಾ ಸೇರಿದಂತೆ ಮಾದಕ ವಸ್ತುಗಳು ವಶಕ್ಕೆ

By

Published : Sep 8, 2020, 5:00 PM IST

ಸ್ಯಾಂಡಲ್​ವುಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜಕ ವಿರೇನ್​ ಖನ್ನಾ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಗಾಂಜಾ, ಎರಡು ಜೊತೆ ಪೊಲೀಸ್​ ಸಮವಸ್ತ್ರ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Party raid on Khan's house toaday
ಪಾರ್ಟಿ ಆಯೋಜಕ ವಿರೇನ್ ಖನ್ನ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜಕ ವಿರೇನ್ ಖನ್ನಾ ಮನೆ ಮೇಲೆ ದಾಳಿ‌ ವೇಳೆ ಗಾಂಜಾ, ಸಿರಿಂಜ್​, ಏಳು ದೇಶದ ಕರೆನ್ಸಿ ಹಾಗೂ ಪೊಲೀಸ್ ಸಮವಸ್ತ್ರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಪಾರ್ಟಿ ಆಯೋಜಕ ವಿರೇನ್ ಖನ್ನಾ

ಇನ್​ಸ್ಪೆಕ್ಟರ್​ ಮಹ್ಮದ್​ ಹಾಗೂ ಶ್ರೀಧರ್ ನೇತೃತ್ವದ ತಂಡ ಕೋರ್ಟ್​ನಿಂದ ಸರ್ಚ್​ ವಾರೆಂಟ್​ ಪಡೆದು ಮನೆ ಮೇಲೆ ದಾಳಿ ನಡೆಸಿದೆ. ಸತತ 8 ಗಂಟೆಗಳ ಕಾಲ ಪರಿಶೀಲನೆ ಮಾಡಲಾಗಿದೆ.

ಸದ್ಯ ತನಿಖಾಧಿಕಾರಿಗಳು ಬಹುತೇಕ ವಸ್ತುಗಳನ್ನು ವಿರೇನ್ ಖನ್ನಾ ಸಮ್ಮುಖದಲ್ಲೇ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಈತ ಸ್ಯಾಂಡಲ್​ವುಡ್​ನ ಕೆಲವರಿಗೆ ಡ್ರಗ್ಸ್​ ಪೂರೈಸುತ್ತಿದ್ದ ಪ್ರಮುಖ ಆರೋಪಿಯಾಗಿದ್ದು, ಈತನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.

ABOUT THE AUTHOR

...view details