ಬೆಂಗಳೂರು:ನಗರದಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿದ್ದ ಪಾದರಾಯನಪುರದಲ್ಲೀಗ ದಿನೇ ದಿನೆ ಸೋಂಕು ಹೆಚ್ಚುತ್ತಿರುವುದರಿಂದ ಸರ್ಕಾರ ಪ್ರತಿ ಭಾನುವಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ, ಪಾದರಾಯನಪುರದಲ್ಲಿ ಮಾತ್ರ ಈ ಲಾಕ್ಡೌನ್ಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಇಲ್ಲಿನ ಜನರು ಗಲ್ಲಿ ಗಲ್ಲಿಗಳಲ್ಲಿ ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಪಾದರಾಯನಪುರದ ಸುತ್ತ ಇರುವ ರಾಯಪುರ, ಜೆ ಜೆ ನಗರ, ಅರಾಫತ್ ನಗರ, ರಾಯಪುರಂ, ಹೊಸ ಗುಡದಹಳ್ಳಿ, ಹಳೆ ಗುಡದಹಳ್ಳಿಯ ಮುಖ್ಯ ರಸ್ತೆಯಲ್ಲಿ ಜನ ತುಂಬಿದ್ದು, ಪೊಲೀಸರು ಸಾರ್ವಜನಿಕರಿಗೆ ಹೊಯ್ಸಳ ವಾಹನ ಮುಖಾಂತರ ಎಚ್ಚರಿಕೆ ನೀಡ್ತಿದ್ದಾರೆ.
ಲಾಕ್ಡೌನ್ಗೆ ಕ್ಯಾರೇ ಎನ್ನುತ್ತಿಲ್ಲ ಪಾದರಾಯನಪುರ ನಿವಾಸಿಗಳು: ಎಚ್ಚರಿಕೆ ನೀಡಿದ ಪೊಲೀಸರು - corona latest news
ಬೆಂಗಳೂರು ಪಾದರಯನಪುರದ ಸುತ್ತ ಇರುವ ರಾಯಪುರ, ಜೆ ಜೆ ನಗರ, ಅರಾಫತ್ ನಗರ, ರಾಯಪುರಂ, ಹೊಸ ಗುಡದಹಳ್ಳಿ, ಹಳೆ ಗುಡದಹಳ್ಳಿಯ ಮುಖ್ಯ ರಸ್ತೆಯಲ್ಲಿ ಜನ ತುಂಬಿದ್ದು, ಪೊಲೀಸರು ಸಾರ್ವಜನಿಕರಿಗೆ ಹೊಯ್ಸಳ ವಾಹನ ಮುಖಾಂತರ ಎಚ್ಚರಿಕೆ ನೀಡ್ತಿದ್ದಾರೆ.
ಪಾದರಾಯನಪುರ ನಿವಾಸಿಗಳು
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಅಗತ್ಯ ವಸ್ತುಗಳನ್ನ ಬೇಗ ಬೇಗ ಪಡೆದು ಮನೆ ಸೇರಿ ಎಂದು ಎಚ್ಚರಿಕೆ ನೀಡ್ತಿದ್ದಾರೆ. ಆದರೂ ಪಾದರಾಯನಪುರ ಜನತೆ ಮಾತ್ರ ಕೊರೊನಾಗೆ ಕ್ಯಾರೇ ಎನ್ನುತ್ತಿಲ್ಲ.