ಬೆಂಗಳೂರು:ಕಳೆದ ರಾತ್ರಿ ಮಾಜಿ ಶಾಸಕ ಮುನಿರತ್ನ ಅವರ ವಿರುದ್ಧ ಮೂಲ ಬಿಜೆಪಿಗರು ಆರ್.ಆರ್ ನಗರ ಪೊಲೀಸ್ ಠಾಣೆ ಮುಂಭಾಗ ತುಳಸಿ ಮುನಿರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಶಾಸಕನ ವಿರುದ್ಧ ಮೂಲ ಬಿಜೆಪಿಗರಿಂದ ರಾತ್ರೋರಾತ್ರಿ ಪ್ರತಿಭಟನೆ - ಮಾಜಿ ಶಾಸಕ ಮುನಿರತ್ನ ವಿರುದ್ದ ಪ್ರತಿಭಟನೆ
ಮಾಜಿ ಶಾಸಕ ಮುನಿರತ್ನ ಅವರ ವಿರುದ್ಧ ಮೂಲ ಬಿಜೆಪಿಗರು ಆರ್.ಆರ್ ನಗರ ಪೊಲೀಸ್ ಠಾಣೆ ಮುಂಭಾಗ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಶಾಸಕ ಮುನಿರತ್ನ ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದರ ಬಗ್ಗೆ ಬಿಜೆಪಿಯ ಕಾರ್ಯಕರ್ತ ಬದ್ರಿನಾಥ್ ಪರೋಕ್ಷವಾಗಿ ಕಮೆಂಟ್ ಮಾಡಿದ್ದರು. ಬದ್ರಿನಾಥ್ ಕಾಮೆಂಟ್ ಮಾಡಿದ ಕಾರಣ ಆರ್.ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ನಿನ್ನೆ ಬದ್ರಿನಾಥ್ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಿದ್ರು. ಬದ್ರಿನಾಥ್ ಬಂಧನ ಖಂಡಿಸಿ ನೂರಾರು ಮೂಲ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಹೊಣೆ ಹೊತ್ತ ತುಳಸಿ ಮುನಿರಾಜ್ ಮಾತನಾಡಿ, ಅನರ್ಹ ಶಾಸಕನ ಹಗರಣವನ್ನು ಹೊರ ತರುವ ವಿಚಾರದ ಬಗ್ಗೆ ಫೇಸ್ಬುಕ್ನಲ್ಲಿ ಬರೆದಿದ್ದಾರೆ. ಈ ಕಾರಣಕ್ಕೆ ಹಿರಿಯ ನಾಗರಿಕ ಅನ್ನೋ ವಿಚಾರವನ್ನು ಗಮನಿಸದೆ ಬಂಧಿಸಿದ್ದಾರೆ. ಬದ್ರಿನಾಥ್ ಕಾಮೆಂಟ್ ಮಾಡಿದ್ದಕ್ಕೆ ಮಾಜಿ ಶಾಸಕ ಮುನಿರತ್ನ ಅಭಿಮಾನಿ ಥ್ರೆಟ್ ಕಾಲ್ ಮಾಡಿದ್ದಾನೆ. ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಫೇಸ್ಬುಕ್ನಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ಹಕ್ಕು ಇದೆ. ಬದ್ರಿನಾಥ್ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.