ಕರ್ನಾಟಕ

karnataka

ETV Bharat / state

ಮೇಯರ್ ಆಗಿ ನಮ್ಮ ಪಕ್ಷದ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ : ಸಚಿವ ಆರ್.ಅಶೋಕ್ ವಿಶ್ವಾಸ

ಬಿಬಿಎಂಪಿ ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಅವರನ್ನು ಪಕ್ಷದ ನಾಯಕರು ಆಯ್ಕೆ ಮಾಡಿದ್ದು, ಈ ಬಾರಿ ಮೇಯರ್ ಆಗಿ ನಮ್ಮ ಪಕ್ಷದ ಅಭ್ಯರ್ಥಿ ಆಯ್ಕೆಯಾಗುವುದು ಖಚಿತವೆಂದು ಸಚಿವ ಆರ್.ಅಶೋಕ್ ಹೇಳಿದರು.

ಸಚಿವ ಆರ್.ಅಶೋಕ್

By

Published : Oct 1, 2019, 10:15 AM IST

Updated : Oct 1, 2019, 11:31 AM IST

ಬೆಂಗಳೂರು: ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆಯಾಗಿ ಗೌತಮ್ ಕುಮಾರ್ ಅವರನ್ನು ಪಕ್ಷದ ನಾಯಕರು ಆಯ್ಕೆ ಮಾಡಿದ್ದು, ಈ ಬಾರಿ ಮೇಯರ್ ಆಗಿ ನಮ್ಮ ಪಕ್ಷದ ಅಭ್ಯರ್ಥಿ ಆಯ್ಕೆಯಾಗುವುದು ಖಚಿತವೆಂದು ಸಚಿವ ಆರ್.ಅಶೋಕ್ ಹೇಳಿದರು.

ಬಿಜೆಪಿ ಕಾರ್ಪೊರೇಟರ್​ಗಳ ಸಭೆಗೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ನಿನ್ನೆ ನಾನು ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಮಾತನಾಡಿದ್ದೇನೆ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಜೋಗುಪಾಳ್ಯ ವಾರ್ಡ್​ ಸದಸ್ಯರಾದ ಗೌತಮ್ ಕುಮಾರ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಉಪ ಮೇಯರ್ ಸ್ಥಾನಕ್ಕೆ ಬೊಮ್ಮನಹಳ್ಳಿ ವಾರ್ಡ್ ಸದಸ್ಯರಾದ ಮೋಹನ್​ ಕುಮಾರ್ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

ಮೇಯರ್ ಆಗಿ ನಮ್ಮ ಪಕ್ಷದ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ : ಸಚಿವ ಆರ್.ಅಶೋಕ್ ವಿಶ್ವಾಸ

ಕಾಂಗ್ರೆಸ್ ಹಾಗೂ ಜೆಡಿಎಸ್​ನಲ್ಲಿ ಒಡಕಿರುವುದು ನಮಗೆ ಉಪಯೋಗವಾಗುತ್ತದೆಯೆಂದು ಹೇಳಿದರು. ಆದರೆ ಉಪಮೇಯರ್ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಇನ್ನೂ ಗೊಂದಲವಿರುವುದು ಸ್ಪಷ್ಟವಾಗಿದೆ. ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಉಪಮೇಯರ್ ಆಗಿ ಹಾಗೂ ಗುರುಮೂರ್ತಿ ರೆಡ್ಡಿ ಆಯ್ಕೆಯಾಗಿದ್ದಾರೆ. ಆದರೀಗ ಇಲ್ಲಿ ಆರ್.ಅಶೋಕ್ ಮೋಹನ್​ರಾಜ್ ಪರ ಬ್ಯಾಟ್ ಬೀಸಿದ್ದಾರೆ. ಕೆಲವು ಮೂಲಗಳ ಪ್ರಕಾರ ಮಹಾಲಕ್ಷ್ಮಿ ಅವರು ಉಪಮೇಯರ್ ಅಭ್ಯರ್ಥಿ ಆಗಿ ಆಯ್ಕೆಯಾಗುತ್ತಾರೆಂಬ ಮಾತುಗಳು ಕೇಳಿಬರುತ್ತಿದೆಯೆಂದರು.

ಇನ್ನೂ ಮಾನ ಮಾರ್ಯಾದೆ ಇದ್ದರೆ ಮೊದಲು ವಿರೋಧ ಪಕ್ಷದ ನಾಯಕರನ್ನು ಆಯ್ಕೆ‌ ಮಾಡಲಿಯೆಂದು ಕಿಡಿಕಾರಿದರು. ನಮ್ಮ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ನಮ್ಮ ಮೊದಲ ಅಭ್ಯರ್ಥಿ ಗೌತಮ್ ಎಂದು ತಿಳಿಸಿದರು. ಕಳೆದ ಒಂದು ವಾರದಿಂದ ಹಲವು ಸಭೆ ಮಾಡಿದ್ದು, ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲವೆಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ನವರ ಟೀಕೆಯಂತೆ ಏನೂ ನಡೆದಿಲ್ಲ. ನಮ್ಮ ಪ್ರಜಾಪ್ರಭತ್ವದ ರೀತಿಯಲ್ಲೇ ಚುನಾವಣೆ ನಡೆಯುತ್ತದೆ. ಇನ್ನೂ ಉಪಮೇಯರ್ ಅಭ್ಯರ್ಥಿಯನ್ನು ಫ್ಲೋರ್​ನಲ್ಲೇ ತಿಳಿಸುತ್ತೇನೆ. ಡೆಪ್ಯುಟಿ ಮೇಯರ್ ಮೂವರ ಜೊತೆಯೂ ಮಾತುಕತೆ ನಡೆಸಿದ್ದು ಯಾರು ನಾಮಪತ್ರ ವಾಪಾಸ್ ಪಡೆಯಬೇಕೆಂದು ಇತ್ಯರ್ಥವಾಗಿದೆ, ‌ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲವೆಂದು ತಿಳಿಸಿದರು.

Last Updated : Oct 1, 2019, 11:31 AM IST

ABOUT THE AUTHOR

...view details